ETV Bharat / state

ಕಲಬುರಗಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ: ಗರ್ಭಿಣಿ, ಬಾಣಂತಿಯರ ನಿತ್ಯ ಪರದಾಟ - lack of fecility in hospital

ಬಿಸಿಲೂರು ಕಲಬುರಗಿ ಜಿಲ್ಲಾಸ್ಪತ್ರೆಯ ದುರಾವಸ್ಥೆಗೆ ರೋಗಿಗಳು ನಿತ್ಯ ಹೈರಾಣಾಗುತ್ತಿದ್ದಾರೆ. ಆಸ್ಪತ್ರೆಯ ವಾರ್ಡ್ ಗಳ ಸುತ್ತಮುತ್ತಾ ಎಲ್ಲೆಂದರಲ್ಲಿ ಕಸ ಬಿದ್ದಿದ್ದರೂ ಸಿಬ್ಬಂದಿ ಮಾತ್ರ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿಲ್ಲ. ಹರಿದ ಬೆಡ್ ಗಳಲ್ಲಿ ತಿಗಣೆ ಕಾಟದ ಮಧ್ಯೆ ರೋಗಿಗಳು ಚಿಕಿತ್ಸೆ ಪಡೆಯುವಂತ ಪರಿಸ್ಥಿತಿ ಇದೆ. ಗಬ್ಬೆದ್ದು ನಾರುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ.

Kalabaragi Government hospital is putting patiens in trouble
ಕಲಬುರಗಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ: ಗರ್ಭಿಣಿ, ಬಾಣಂತಿಯರ ನಿತ್ಯ ಪರದಾಟ
author img

By

Published : Aug 28, 2020, 2:07 PM IST

ಕಲಬುರಗಿ: ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಯನ್ನು ನೆಚ್ಚಿಕೊಂಡಿದ್ದಾರೆ. ಆಸ್ಪತ್ರೆಯ ದುರಾವಸ್ಥೆಯಿಂದ ರೋಗಿಗಳು ನಿತ್ಯ ಪರದಾಡುವಂತಾಗಿದೆ. ಅದರಲ್ಲೂ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ರೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಇದ್ಯಾವುದು ತಮಗೆ ಸಂಬಂಧವೇ ಇಲ್ಲವೆಂಬಂತೆ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

ಕಲಬುರಗಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ: ಗರ್ಭಿಣಿ, ಬಾಣಂತಿಯರ ನಿತ್ಯ ಪರದಾಟ

ಬಿಸಿಲೂರು ಕಲಬುರಗಿ ಜಿಲ್ಲಾಸ್ಪತ್ರೆಯ ದುರಾವಸ್ಥೆಗೆ ರೋಗಿಗಳು ನಿತ್ಯ ಹೈರಾಣಾಗುತ್ತಿದ್ದಾರೆ. ಆಸ್ಪತ್ರೆಯ ವಾರ್ಡ್ ಗಳ ಸುತ್ತಮುತ್ತ ಎಲ್ಲೆಂದರಲ್ಲಿ ಕಸ ಬಿದ್ದಿದ್ದರೂ ಸಿಬ್ಬಂದಿ ಮಾತ್ರ ಅದನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿಲ್ಲ. ಹರಿದ ಬೆಡ್​ಗಳಲ್ಲಿ ತಿಗಣೆ ಕಾಟದ ಮಧ್ಯೆ ರೋಗಿಗಳು ಚಿಕಿತ್ಸೆ ಪಡೆಯುವಂತ ಪರಿಸ್ಥಿತಿ ಇದೆ. ಗಬ್ಬೆದ್ದು ನಾರುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ.

ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಗುಣಮಟ್ಟದ ಆಹಾರ ಕೂಡ ನೀಡಿತ್ತಿಲ್ಲ ಎಂದು ಬಡ ರೋಗಿಗಳು ಅಸಹಾಯಕರಾಗಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಸಮಸ್ಯೆ ಬಗೆ ಹರಿಸುವಂತೆ ಸಾಕಷ್ಟು ಸಂಘಟನೆಗಳು ಹೋರಾಟ ನಡೆಸಿದ್ರೂ ಆಸ್ಪತ್ರೆ ಆಡಳಿತ ವರ್ಗ ಮಾತ್ರ ತಮಗೇನೂ ತಿಳಿದೇ ಇಲ್ಲ ಎಂಬಂತೆ ವರ್ತಿಸುತ್ತಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಸುಮಾರು 40 ವರ್ಷಗಳಷ್ಟು ಹಳೆಯದಾದ ಆಸ್ಪತ್ರೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಬಾಂತಿಯರಿರುವ ವಾರ್ಡ್ ಗಳಲ್ಲಿ ಒಂದೆಡೆ ಛಾವಣಿಯ ಸಿಮೆಂಟ್ ಕಿತ್ತು ಬೀಳುತ್ತಿದ್ದರೆ ಇನ್ನೊಂದೆಡೆ ಮಳೆ ಬಂದಾಗ ಗೋಡೆಗಳು ಹಸಿಯಾಗಿ ನೀರು ಕೂಡ ಸೋರುತ್ತಿದೆ‌. ಇಲ್ಲಿನ ಕಸದ ರಾಶಿಗೆ ಕಳೆದ ತಿಂಗಳು ಹಂದಿಗಳ ಹಿಂಡು ಕೂಡ ಲಗ್ಗೆ ಇಟ್ಟು ರಾಜಾರೋಷವಾಗಿ ತಿರುಗಾಡಿದ್ದವು‌.

ಘಟನೆ ಸಂಬಂಧ ಖುದ್ದು ಜಿಲ್ಲಾಧಿಕಾರಿ ಶರತ್ ಬಿ. ಅವರು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ವೈದ್ಯಾಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಸ್ವಚ್ಛತೆ ಕಾಪಾಡುವಂತೆ ಖಡಕ್ ಆಗಿ ಸೂಚಿಸಿದ್ರು. ಜಿಲ್ಲೆಯಲ್ಲಿ ಜೀಮ್ಸ್ ಆಸ್ಪತ್ರೆ ಆಗಿ ಜಿಮ್ಸ್ ನಲ್ಲಿ ಜಿಲ್ಲಾಸ್ಪತ್ರೆ ವಿಲೀನವಾದ ನಂತರ ಈ ಹಳೆ ಜಿಲ್ಲಾಸ್ಪತ್ರೆ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ‌. ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿದೆ.

ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ್ದಕ್ಕೆ ಸರ್ಕಾರಿ ಆಸ್ಪತ್ರೆಗಳಿಗೆ ಆಗಮಿಸುತ್ತಾರೆ. ಆದ್ರೆ ಇಲ್ಲಿನ ಆಸ್ಪತ್ರೆಯ ವೈದ್ಯ ಸಿಬ್ಬಂದಿಯ ದುರಾಡಳಿತ, ನಿರ್ಲಕ್ಷ್ಯತನಕ್ಕೆ ಬಡ ರೋಗಿಗಳು ಹಿಡಿಶಾಪ ಹಾಕುವಂತಾಗಿದೆ‌. ಇನ್ನಾದ್ರು ಆರೋಗ್ಯ ಸಚಿವರು ಇತ್ತ ಗಮನ ಹರಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.