ETV Bharat / state

ಭೀಕರ ಮಳೆಗೆ ಮತ್ತೆ ಮುಳುಗಿದ ಕಾಗಿಣಾ ನದಿ ಮೇಲ್ಸೇತುವೆ : ಸಂಚಾರ ಸ್ಥಗಿತ

ಭಾರಿ ಮಳೆ ಹಿನ್ನೆಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಕಾಗಿಣಾ ನದಿ ಮೇಲ್ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ‌.

Kagina river water cutting the connectivity between Hyderabad and Kalburgi
ಕಾಗಿಣಾ ನದಿ ಮೇಲ್ಸೇತುವೆ ಮುಳುಗಡೆ
author img

By

Published : Sep 5, 2021, 10:27 AM IST

ಸೇಡಂ/ಕಲಬುರಗಿ: ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಮಳಖೇಡ ಗ್ರಾಮದ ಕಾಗಿಣಾ ನದಿ ಮೇಲ್ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.

ಮೇಲ್ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಪರಿಣಾಮ ಕಲಬುರಗಿಯಿಂದ ಹೈದರಾಬಾದ್​ಗೆ ಸಂಪರ್ಕ ಕಲ್ಪಿಸುವ ವಾಗ್ದಾರಿ-ರಿಬ್ಬನಪಲ್ಲಿ ಹೆದ್ದಾರಿ ಸಂಪೂರ್ಣ ಸ್ಥಗಿತಗೊಂಡಿದೆ.

ಕಾಗಿಣಾ ನದಿ ಮೇಲ್ಸೇತುವೆ ಮುಳುಗಡೆ

ನದಿಯ ಕಿನಾರೆಯಲ್ಲಿರುವ ಐತಿಹಾಸಿಕ ಟೀಕಾಚಾರ್ಯರ ಮೂಲ ವೃಂದಾವನ ಸಮೀಪಕ್ಕೆ ನೀರು ಬಂದು ನಿಂತಿದ್ದು, ಮೂಲ ವೃಂದಾವನಕ್ಕೆ ನೀರು ನುಗ್ಗುವ ಆತಂಕವಿದೆ. ಅಲ್ಲದೇ, ಪಟ್ಟಣದ ಚೋಟಿಗಿರಣಿ ಬಡಾವಣೆಯ ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ‌.

ಭೀಕರ ಮಳೆ ಪರಿಣಾಮ ಬಡಾವಣೆಯ ಅನೇಕ ರಸ್ತೆಗಳಲ್ಲಿ ಮೊಳಕಾಲೆತ್ತರಕ್ಕೆ ನೀರು ಜಮಾವಣೆಯಾಗಿದ್ದು, ಮನೆಯಿಂದ ಹೊರಬರಲಾರದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.