ಕಲಬುರಗಿ: ಕೋವಿಡ್ -19 ಸೋಂಕಿಗೊಳಗಾಗಿ ನಗರದ ಬುದ್ಧವಿಹಾರ ಕ್ವಾರಂಟೈನ್ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಕಲಬುರಗಿ ಪೀಠದ ಮಹಿಳಾ ಸಿಬ್ಬಂದಿಗೆ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಹೂಗುಚ್ಛ ನೀಡಿ ಸನ್ಮಾನಿಸಿದರು.
ನಂತರ ಮಾತನಾಡಿದ ನ್ಯಾಯಮೂರ್ತಿಗಳು, ನೀವು ನಮ್ಮೆಲ್ಲರ ಕುಟುಂಬದ ಸದಸ್ಯರಿದ್ದಂತೆ. ಯಾವುದೇ ಅಂಜಿಕೆಯಿಲ್ಲದೆ ಕರ್ತವ್ಯ ನಿರ್ವಹಿಸುವಂತೆ ಧೈರ್ಯ ತುಂಬಿದರು. ಜೊತೆಗೆ ಎಲ್ಲರೂ ಮಾಸ್ಕ್, ಸ್ಯಾನಿಟೈಸರ್ ಬಳಸುವ ಮೂಲಕ ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಕರೆ ನೀಡಿದರು.