ETV Bharat / state

ಕಲಬುರಗಿಯಲ್ಲಿ ಬಿಜೆಪಿ-ಕಾಂಗ್ರೆಸ್‌ಗೆ 'ತೆನೆ'ಬೇನೆ.. ಮೇಯರ್ ಪಟ್ಟ ಬಿಟ್ಟು ಕೊಟ್ಟವರಿಗೇ ಜೆಡಿಎಸ್‌ ಬೆಂಬಲ.. - ಮೇಯರ್ ಪಟ್ಟ ನೀಡುವ ಪಕ್ಷಕ್ಕೆ ಬೆಂಬಲ ಘೋಷಿಸಿದ ಜೆಡಿಎಸ್​ ನಾಯಕರು

ಕಾಂಗ್ರೆಸ್ ಹಾಗೂ ಬಿಜೆಪಿ ಆಹ್ವಾನಕ್ಕೆ ಬಂದರೂ ಸ್ವಾಗತಿಸುತ್ತೇವೆ. ಆದರೆ, ಕಾಂಗ್ರೆಸ್ ನಾಯಕರಿಗೆ ನಮ್ಮ ಜೊತೆಗೆ ಮಾತನಾಡುವಷ್ಟು ಸೌಜನ್ಯ ಸಹ ಇಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಬಿಟ್ಟರೆ ಕಾಂಗ್ರೆಸ್​​​ ಯಾವ ನಾಯಕರು ಜೆಡಿಎಸ್‌ನವರನ್ನು ಸಂಪರ್ಕ ಮಾಡಿಲ್ಲ. ಆದರೆ, ಬಿಜೆಪಿಯಿಂದ ಸಾಕಷ್ಟು ಜನರು ನಮ್ಮನ್ನು ಸಂಪರ್ಕಿಸಿದ್ದಾರೆ..

Nasir Hussain Ustad
ನಾಸೀರ್ ಹುಸೇನ್ ಉಸ್ತಾದ್
author img

By

Published : Sep 18, 2021, 9:04 PM IST

ಕಲಬುರಗಿ : ಮಹಾನಗರ ಪಾಲಿಕೆ ಗದ್ದುಗೆ ಗುದ್ದಾಟ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕಿಂಗ್ ಮೇಕರ್ ಜೆಡಿಎಸ್ ನಾಯಕರು, ಮೇಯರ್ ಸ್ಥಾನ ನೀಡಿದವರಿಗೆ ಮಾತ್ರ ತಮ್ಮ ಬೆಂಬಲ ಎಂದು ಘೋಷಿಸಿಕೊಂಡಿದ್ದಾರೆ.

ಜೆಡಿಎಸ್‌ ಮುಖಂಡ ನಾಸೀರ್ ಹುಸೇನ್ ಉಸ್ತಾದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವುದು..

ಜೆಡಿಎಸ್ ನಾಯಕರು ಪಟ್ಟು ಹಿಡಿದು ಕುಳಿತಿರುವುದು ಎರಡು ರಾಜಕೀಯ ಪಕ್ಷಗಳಿಗೆ ನುಂಗಲಾರದ ತುಪ್ಪವಾಗಿದೆ. ಜೆಡಿಎಸ್​ಗೆ ಯಾರು ಮೇಯರ್ ಸ್ಥಾನ ಕೊಡುತ್ತಾರೋ ಅವರಿಗೆ ನಮ್ಮ ಬೆಂಬಲ ಎಂದು ಜೆಡಿಎಸ್ ಮುಖಂಡ ಅಲ್ಪಸಂಖ್ಯಾತರ ರಾಜ್ಯಾಧ್ಯಕ್ಷ ನಾಸೀರ್ ಹುಸೇನ್ ಉಸ್ತಾದ್ ತಿಳಿಸಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ಆಹ್ವಾನಕ್ಕೆ ಬಂದರೂ ಸ್ವಾಗತಿಸುತ್ತೇವೆ. ಆದರೆ, ಕಾಂಗ್ರೆಸ್ ನಾಯಕರಿಗೆ ನಮ್ಮ ಜೊತೆಗೆ ಮಾತನಾಡುವಷ್ಟು ಸೌಜನ್ಯ ಸಹ ಇಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಬಿಟ್ಟರೆ ಕಾಂಗ್ರೆಸ್​​​ ಯಾವ ನಾಯಕರು ಜೆಡಿಎಸ್‌ನವರನ್ನು ಸಂಪರ್ಕ ಮಾಡಿಲ್ಲ. ಆದರೆ, ಬಿಜೆಪಿಯಿಂದ ಸಾಕಷ್ಟು ಜನರು ನಮ್ಮನ್ನು ಸಂಪರ್ಕಿಸಿದ್ದಾರೆ.

ಕಾಂಗ್ರೆಸ್​​ನವರು ಸೆಕ್ಯುಲರ್ ಎಂದ್ಹೇಳಿ ಕುಳಿತರೆ ಮುಗಿಯುವುದಿಲ್ಲ. ಕುಮಾರಸ್ವಾಮಿಯವರು ಸಹ ಮೇಯರ್ ಪಟ್ಟ ಯಾವ ಪಕ್ಷ ನೀಡುತ್ತದೆಯೋ ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳೋಣ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದೀಗ ನಾಲ್ಕು ಜನ ಜೆಡಿಎಸ್ ಸದಸ್ಯರು ಬೆಂಗಳೂರಿನಿಂದ ಕಲಬುರಗಿಗೆ ಬಂದಿದ್ದಾರೆ. ನಮ್ಮಲಿ ಕುಮಾರಸ್ವಾಮಿಯವರ ನಿರ್ಧಾರ ಅಂತಿಮ ಎಂದಿದ್ದಾರೆ.

ಕಲಬುರಗಿ ಸಿಂಗಲ್ ಕಾರ್ಪೊರೇಟರ್ ಕೂಡ ಅಧ್ಯಕ್ಷರಾಗಿರುವ ಉದಾಹರಣೆ ಇದೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಂದಿಲ್ಲ. ಇಲ್ಲಿ ನಾವೇ ನಿರ್ಣಾಯಕರು ಎಂದರು.

ಓದಿ: ನಾಳಿನ ಸಭೆಯಲ್ಲಿ ಮುಂಬರುವ ಚುನಾವಣೆ ಬಗ್ಗೆ ರಣತಂತ್ರ ರೂಪಿಸುತ್ತೇವೆ : ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.