ETV Bharat / state

ಕಲಬುರಗಿ ರೈತರಿಗೆ ಬಿಗ್ ಶಾಕ್​: ಬಿಸಿಯೂಟ ಯೋಜನೆ ಟೆಂಡರ್ ಮಿತಿ ಹೆಚ್ಚಳ - ಮಾಲೀಕಯ್ಯ ಗುತ್ತೇದಾರ್

25 ಕೋಟಿಗೆ ನಿಗದಿಪಡಿಸಲಾದ ವಾರ್ಷಿಕ ವಹಿವಾಟು ಟೆಂಡರ್ ಮಿತಿಯನ್ನು ರದ್ದುಪಡಿಸಿ 5 ಕೋಟಿಗೆ ಇಳಿಸುವ ಮೂಲಕ ತೊಗರಿ ಬೇಳೆ ಮತ್ತು ಅಕ್ಕಿ ಉತ್ಪಾದಕರಿಗೆ ಹಾಗೂ ಈ ಭಾಗದ ರೈತರಿಗ ಅನುಕೂಲವಾಗುವಂತೆ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

fdff
ಕಲಬುರಗಿ ರೈತರಿಗೆ ಬಿಗ್ ಶಾಕ್​
author img

By

Published : Aug 6, 2020, 8:27 AM IST

ಕಲಬುರಗಿ: ಕೊರೊನಾ ಆತಂಕದ ನಡುವೆ ರಾಜ್ಯ ಸರ್ಕಾರ ಕಲಬುರಗಿ ಭಾಗದ ರೈತರಿಗೆ ಶಾಕ್ ಕೊಟ್ಟಿದೆ. ಬಿಸಿಯೂಟ ಯೋಜನೆಯಲ್ಲಿ ಟೆಂಡರ್​​ನ ಮಿತಿ ಹೆಚ್ಚಿಸುವ ಮೂಲಕ ಸರ್ಕಾರ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

dssd
ಮಾಲೀಕಯ್ಯ ಗುತ್ತೇದಾರ್

ಮಧ್ಯಾಹ್ನದ ಬಿಸಿ ಊಟ ಯೋಜನೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಿಂದ ತೊಗರಿಬೇಳೆ ಮತ್ತು ಅಕ್ಕಿಯನ್ನು ಮಾರುಕಟ್ಟೆ ದರಕ್ಕೆ ಖರೀದಿಸಿ ಟೆಂಡರ್​ನಲ್ಲಿ ಭಾಗವಹಿಸಲು ವಾರ್ಷಿಕ ವಹಿವಾಟು 25 ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿದೆ. ಪ್ರಮುಖ ಬೆಳೆಯಾದ ಜಿ‌ಐ ಮಾನ್ಯತೆ ಪಡೆದ ತೊಗರಿಬೇಳೆ ಈ ಭಾಗದ ಅನ್ನದಾತನ ಉಸಿರಾಗಿದೆ. ಅಕ್ಕಿ ಉತ್ಪಾದಕರು ಸಹ ಸಂಕಷ್ಟ ಎದುರಿಸುವುದರಲ್ಲಿ ಎರಡು‌ ಮಾತಿಲ್ಲ. ಸರ್ಕಾರ ಟೆಂಡರ್ ಮಿತಿ ಹೆಚ್ಚಿಸುವ ಮೂಲಕ‌ ಈ ಭಾಗದ ರೈತರಿಗೆ ಅನ್ಯಾಯ ಮಾಡಲು ಹೊರಟಿದೆ ಎಂದು ರೈತರು ಆರೋಪಿಸಿದ್ದಾರೆ.

ವಾರ್ಷಿಕ ವಹಿವಾಟು 25 ಕೋಟಿಗೆ ನಿಗದಿಪಡಿಸುವ ಇಲಾಖೆಯ ನಿರ್ಧಾರ ವಿರೋಧಿಸಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟಕ್ಕೆ ತೊಗರಿಬೇಳೆ ಮತ್ತು ಅಕ್ಕಿಯನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಿಂದ ಟೆಂಡರ್ ಕರೆದು ಉತ್ಪಾದಕರಿಗೆ ಖರೀದಿಸುವ ಜವಾಬ್ದಾರಿಯನ್ನು ನೀಡಲಾಗಿದೆ. ಅದರಂತೆ ಟೆಂಡರ್​​ನಲ್ಲಿ ಕರೆಯಲಾದ ವಾರ್ಷಿಕ ವಹಿವಾಟು 2 ಕೋಟಿ ರೂಪಾಯಿ ಹೊಂದಿದ್ದಲ್ಲಿ ಟೆಂಡರ್ ನಲ್ಲಿ ಭಾಗವಹಿಸಲು ಷರತ್ತು ವಿಧಿಸಲಾಗಿತ್ತು. ಇದೀಗ ಏಕಾಏಕಿ ಮಿತಿ ಹೆಚ್ಚಿಸಿ ತಿದ್ದುಪಡಿ ತರಲಾಗಿದೆ. ಇದು ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಿತಿಯನ್ನ 25 ಕೋಟಿಯಿಂದ 5 ಕೋಟಿ ರೂ.ಗೆ ಇಳಿಕೆ ಮಾಡುವಂತೆ ಒತ್ತಾಯಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.