ಕಲಬುರಗಿ: ಅಕ್ರಮ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಓರ್ವ ವಿದ್ಯಾರ್ಥಿ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು 23 ಕೆಜಿ ಮಾಲು ಜಪ್ತಿ ಮಾಡಿದ್ದಾರೆ. ಮಹಾರಾಷ್ಟ್ರ ಮೂಲದ ಭೀಮಾ ಹೊನ್ನಳ್ಳಿ (30), ಲಕ್ಷ್ಮಣ ಸೀತಾಳಗೇರಿ (36) ಹಾಗೂ ಯಾದಗಿರಿ ಮೂಲದ ವಿದ್ಯಾರ್ಥಿ ಧರ್ಮರಾಜ ಬೇವಿನಕಟ್ಟಿ (23) ಬಂಧಿತರು.
ನಗರದ ಎಂ.ಎಸ್.ಕೆ.ಮಿಲ್ ಗ್ರೌಂಡ್ನಲ್ಲಿ ಮಾರಾಟ ಜಾಲದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ್ದರು. ಜಪ್ತಿ ಮಾಡಿದ ಗಾಂಜಾ ಮೌಲ್ಯ 2.3 ಲಕ್ಷ ರೂ ಎಂದು ತಿಳಿದುಬಂದಿದೆ. ಎರಡು ಮೊಬೈಲ್, ಒಂದು ಪಲ್ಸರ್ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅರ್ಪಿತಾ ಮುಖರ್ಜಿ ನಿವಾಸದಲ್ಲಿ ಮತ್ತೆ ₹15 ಕೋಟಿ ನಗದು ಪತ್ತೆ.. ಮುಂದುವರಿದ ಎಣಿಕೆ ಕಾರ್ಯ