ETV Bharat / state

ಕಲಬುರಗಿಯಲ್ಲಿ ವಲಸೆ ಕಾರ್ಮಿಕರಿಂದ ಎಚ್ಚರಿಕೆ... ಕ್ವಾರಂಟೈನ್ ಮಾಡಿದರೆ ಸುಸೈಡ್​ ಬೆದರಿಕೆ

ಮುಂಬೈನಿಂದ ಸಾರಿಗೆ ಬಸ್ ಮೂಲಕ ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿಳಿದ ಸುಮಾರು 60 ಜನ ವಲಸೆ ಕಾರ್ಮಿಕರು ಮನೆ ಸೇರುವ ಕೌತುಕದಲ್ಲಿದ್ದರು. ಆದರೆ, 14 ದಿ‌ನ ಕಡ್ಡಾಯವಾಗಿ ಕ್ವಾರಂಟೈನ್ ಕೇಂದ್ರದಲ್ಲಿ ಇರುವಂತೆ ಅಧಿಕಾರಿಗಳು ಹೇಳಿದ್ದಕ್ಕೆ ತೀವ್ರ ಆಕ್ರೋಶಗೊಂಡ ಕಾರ್ಮಿಕರು, ಸಂಸದ ಉಮೇಶ ಜಾಧವ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

author img

By

Published : May 13, 2020, 3:11 PM IST

If quarantine ourselves we will commit suicide
ವಲಸೆ ಕಾರ್ಮಿಕರ ಎಚ್ಚರಿಕೆ

ಕಲಬುರಗಿ: ನಮ್ಮನ್ನು ನಮ್ಮ ಮನೆಗೆ ಕಳುಹಿಸಿ ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಹೊರತಾಗಿ ಕ್ವಾರಂಟೈನ್ ಕೇಂದ್ರಕ್ಕೆ ಹೋಗುವುದಿಲ್ಲ ಎಂದು ಮುಂಬೈನಿಂದ ಜಿಲ್ಲೆಗೆ ಆಗಮಿಸಿದ ಬಂಜಾರ ಸಮುದಾಯದ ವಲಸೆ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.

ಮುಂಬೈನಿಂದ ಸಾರಿಗೆ ಬಸ್ ಮೂಲಕ ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿಳಿದ ಸುಮಾರು 60 ಜನ ವಲಸೆ ಕಾರ್ಮಿಕರು ಮನೆ ಸೇರುವ ಕೌತುಕದಲ್ಲಿದ್ದರು. ಆದರೆ, 14 ದಿ‌ನ ಕಡ್ಡಾಯವಾಗಿ ಕ್ವಾರಂಟೈನ್ ಕೇಂದ್ರದಲ್ಲಿ ಇರುವಂತೆ ಅಧಿಕಾರಿಗಳು ಹೇಳಿದ್ದಕ್ಕೆ ತೀವ್ರ ಆಕ್ರೋಶಗೊಂಡ ಕಾರ್ಮಿಕರು, ಸಂಸದ ಉಮೇಶ ಜಾಧವ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಾಪಸ್ ಬನ್ನಿ ಎಂದು ನಮ್ಮನ್ನು ಕರೆಸಿ ಸಂಸದ ಉಮೇಶ್ ಜಾಧವ್ ಈಗ ನಡು ರಸ್ತೆಯಲ್ಲಿಯೇ ಕೈಬಿಟ್ಟು ಅಪಮಾನಗೊಳಿಸಿದ್ದಾರೆ. ಕ್ವಾರಂಟೈನ್ ಮಾಡುವುದಾಗಿ ಮೊದಲೇ ತಿಳಿಸಿದ್ದರೆ ನಾವು ಮುಂಬೈಯಿಂದ ಬರ್ತಾನೆ ಇರಲಿಲ್ಲ. ನಮ್ಮ ನಮ್ಮ ಮನೆಗೆ ಹೋಗಲು ಬಿಡಿ, ಇಲ್ಲವಾದರೆ ನಾವು ನಡೆದುಕೊಂಡಾದರೂ ಪರವಾಗಿಲ್ಲ. ಮುಂಬೈಗೆ ವಾಪಸ್ ಹೋಗುತ್ತೇವೆ. ಇದಕ್ಕೂ ಅನುಮತಿ ಕೊಡದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಮನವೊಲಿಸಲು ಪ್ರಯತ್ನಿಸಿದ ಅಧಿಕಾರಿಗಳ ಮಾತಿಗೂ ಕಾರ್ಮಿಕರು ಜಗ್ಗಲಿಲ್ಲ. ಈಗಾಗಲೇ ಮುಂಬೈದಿಂದ ಸುಮಾರು 1,500 ಕ್ಕೂ ಅಧಿಕ ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದು, ಅವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿದೆ. ವಲಸೆ ಕಾರ್ಮಿಕರ ಆಗಮನದಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿ ಇಲ್ಲಿನ ಜನರನ್ನು ಕಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.