ETV Bharat / state

ಕಲಬುರಗಿಯಲ್ಲಿ ಹಿಟ್​ ಆ್ಯಂಡ್​ ರನ್ ಕೇಸ್​: ಪತ್ನಿ ಸ್ಥಳದಲ್ಲೇ ಸಾವು, ಪತಿ-ಮಗುವಿಗೆ ಗಾಯ

author img

By

Published : Dec 7, 2021, 10:23 AM IST

ಇಂದು ಬೆಳಗ್ಗೆ ಕಲಬುರಗಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಗಂಡ-ಹೆಂಡ್ತಿ, ಮಗು ತೆರಳುತ್ತಿದ್ದ ಬೈಕ್​ಗೆ ಟಿಪ್ಪರ್​ ಲಾರಿಯೊಂದು ಡಿಕ್ಕಿ ಹೊಡೆದಿದೆ.

Kalaburagi horrific road accident, road accident in Kalaburagi ring road, Tipper collied with Bike, Bike rider died in accident, Hit and run in Kalaburagi, ಕಲಬುರಗಿ ಭೀಕರ ರಸ್ತೆ ಅಪಘಾತ, ಕಲಬುರಗಿ ರಿಂಗ್​ ರಸ್ತೆಯಲ್ಲಿ ರಸ್ತೆ ಅಪಘಾತ, ಬೈಕ್​ಗೆ ಡಿಕ್ಕಿ ಹೊಡೆದ ಟಿಪ್ಪರ್, ಅಪಘಾತದಲ್ಲಿ ಬೈಕ್​ ಸವಾರ ಸ್ಥಳದಲ್ಲೇ ಸಾವು, ಕಲಬುರಗಿಯಲ್ಲಿ ಹಿಟ್​ ಆ್ಯಂಡ್​ ರನ್​,
ಕಲಬುರಗಿಯಲ್ಲಿ ಹಿಟ್​ ಆ್ಯಂಡ್​ ರನ್

ಕಲಬುರಗಿ: ನಗರದ ರಿಂಗ್ ರಸ್ತೆಯ ಸನಾ ಹೋಟೆಲ್ ಬಳಿ ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೀತಾ ಬಿರಾದರ್ (62) ಮೃತ ದುರ್ದೈವಿ. ಪತಿ ಮತ್ತು ಮಗುವಿನೊಂದಿಗೆ ಮನೆಗೆ ಹೊಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನಿಮ್ಮ ಕಾರಿಗೆ ಉತ್ತಮ ವಿಮಾ ಪಾಲಿಸಿ ಆಯ್ಕೆ ಬಗೆ ಹೇಗೆ? ಇಲ್ಲಿದೆ ಉತ್ತರ..

ಟಪ್ಪರ್​ ಗುದ್ದಿದ ರಭಸಕ್ಕೆ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಸಮತೋಲನ ಕಳೆದುಕೊಂಡು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಅವರ ತಲೆಯ ಮೇಲೆ ಟಿಪ್ಪರ್ ಚಕ್ರ ಹಾದುಹೋಗಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದರು. ಘಟನೆಯ ನಂತರ ಟಿಪ್ಪರ್ ಚಾಲಕ ವಾಹನಸಮೇತ ಪರಾರಿಯಾಗಿದ್ದಾನೆ. ಸಂಚಾರಿ ಠಾಣೆ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಬಳಿಕ ರಿಂಗ್ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ನಗರದಲ್ಲಿ ಮರಳು ಸಾಗಾಣಿಕೆ ಮಾಡುವ ಟಿಪ್ಪರ್​ಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಯ ಮೇಲೆ ಜನರು ಓಡಾಡದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.