ETV Bharat / state

ಹಿಂದೂ-ಮುಸ್ಲಿಂ-ಕ್ರೈಸ್ತರೆಲ್ಲ ಅಣ್ಣ-ತಮ್ಮಂದಿರಂತೆ ಯುಗಾದಿ ಹಬ್ಬ ಆಚರಿಸಿದರು.. ಸೌಹಾರ್ದತೆಗೆ ಬಸವಣ್ಣನೇ ಸಾಕ್ಷಿ.. - ಕಲಬುರಗಿಯಲ್ಲಿ ಬೇವು ಬೆಲ್ಲ ನೀಡಿ ಸೌಹಾರ್ದತೆಯ ಯುಗಾದಿ ಆಚರಿಸಿದ ಹಿಂದು, ಮುಸ್ಲಿಂ, ಕ್ರೈಸ್ತರು

ಸೌಹಾರ್ದ ಕರ್ನಾಟಕ ವೇದಿಕೆ ವತಿಯಿಂದ ಇಂದು ನಗರದ ಜಗತ್ ವೃತ್ತದಲ್ಲಿ, ಸೌಹಾರ್ದ ಭಾರತಕ್ಕಾಗಿ ಸೌಹಾರ್ದ ಯುಗಾದಿಯನ್ನ ಅತ್ಯಂತ ವಿಶೇಷವಾಗಿ ಆಚರಿಸಲಾಯಿತು..

ಸೌಹಾರ್ದತೆಯ ಯುಗಾದಿ ಆಚರಿಸಿದ ಹಿಂದು, ಮುಸ್ಲಿಂ, ಕ್ರೈಸ್ತರು

author img

By

Published : Apr 2, 2022, 3:20 PM IST

ಕಲಬುರಗಿ : ರಾಜ್ಯದಲ್ಲೆಡೆ ಹಿಜಾಬ್​, ಮುಸಲ್ಮಾನರಿಗೆ ಹಿಂದೂ ದೇಗುಲಗಳ ಬಳಿ ವ್ಯಾಪಾರಕ್ಕೆ ಬಹಿಷ್ಕಾರ, ಹಲಾಲ್ ಈ ಎಲ್ಲಾ ವಿವಾದಗಳು ಇನ್ನೂ ಬೂದಿ ಮುಚ್ಚಿದ ಕೆಂಡದಂತಿವೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಇಂದು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ತಾವೆಲ್ಲ ಒಂದೇ ಎಂದು ಸೌಹಾರ್ದತೆ ಮೆರೆದಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸರ್ವಧರ್ಮಗಳ ಮುಖಂಡರು ಸಮಾರಂಭದಲ್ಲಿ ಭಾಗವಹಿಸಿ ಬೇವು-ಬೆಲ್ಲ ಸವಿದು ಸೌಹಾರ್ದತೆ ಮೆರೆದರು.

ಸೌಹಾರ್ದತೆಯ ಯುಗಾದಿ ಆಚರಿಸಿದ ಹಿಂದು-ಮುಸ್ಲಿಂ-ಕ್ರೈಸ್ತರು..

ಸಮುದಾಯ ಕಲಬುರಗಿ ಮತ್ತು ಸೌಹಾರ್ದ ಕರ್ನಾಟಕ ವೇದಿಕೆ ವತಿಯಿಂದ ಇಂದು ನಗರದ ಜಗತ್ ವೃತ್ತದಲ್ಲಿ, ಸೌಹಾರ್ದ ಭಾರತಕ್ಕಾಗಿ ಸೌಹಾರ್ದ ಯುಗಾದಿಯನ್ನ ಅತ್ಯಂತ ವಿಶೇಷವಾಗಿ ಆಚರಿಸಲಾಯಿತು. ಹೋರಾಟಗಾರ್ತಿ ಕೆ. ನೀಲಾ ನೇತೃತ್ವದಲ್ಲಿ ನಡೆದ ಯುಗಾದಿ ಹಬ್ಬದ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳ ಗುರುಗಳು ಭಾಗವಹಿಸಿದ್ದರು. ಮುಸ್ಲಿಂ ಮಹಿಳೆಯರಿಗೆ ಮತ್ತು ಧರ್ಮ ಗುರುಗಳಿಗೆ ಬೇವು ಬೆಲ್ಲದ ಪಾನಕ‌ ಕುಡಿಸಿ ಯುಗಾದಿ ಹಬ್ಬದ ಪರಸ್ಪರ ಶುಭಾಶಯಗಳನ್ನ ವಿನಿಮಯ ಮಾಡಿಕೊಂಡರು.

ಇನ್ನೂ ಹಿಂದೂ-ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಮಧ್ಯೆ ಯಾವುದೇ ರೀತಿಯ ಬಿರುಕು ಉಂಟಾಗಬಾರದು ಎಂದು ಸರ್ವಧರ್ಮಗಳ ಮುಖಂಡರನ್ನ ಕರೆಯಿಸಿ ಯುಗಾದಿ ಹಬ್ಬವನ್ನ ಆಚರಣೆ ಮಾಡಲಾಯಿತು. ಜಗತ್ ವೃತ್ತದ ಬಸವೇಶ್ವರ ಪುತ್ಥಳಿ ಬಳಿ ಆಯೋಜಿಸಿದ್ದ ಸೌಹಾರ್ದತೆಯ ಯುಗಾದಿ ಹಬ್ಬದದಲ್ಲಿ ಪಾದ್ರಿಗಳು, ಮೌಲ್ವಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಬೇವು-ಬೆಲ್ಲದ ಪಾನಕ ಸವಿದರು.

ಈ ಕುರಿತು ಚರ್ಚ್‌ನ ಫಾದರ್ ಮಾತನಾಡಿ, ಇಂದಿನ ದಿನಗಳಲ್ಲಿ ಧರ್ಮಧರ್ಮಗಳ ಮಧ್ಯೆ ಸಂಘರ್ಷಗಳು ನಡೆಯುತ್ತಿದ್ದು, ಸಾಮಾರಸ್ಯಕ್ಕಾಗಿ ಹಾಗೂ ಸೌಹಾರ್ದತೆಗಾಗಿ ಎಲ್ಲ ಧರ್ಮದ ಜನರನ್ನ ಒಂದೇ ವೇದಿಕೆಯಲ್ಲಿ ಯುಗಾದಿ ಹಬ್ಬವನ್ನ ಆಚರಿಸಿದ್ದು ಸಂತಸ ತಂದಿದೆ ಎಂದರು. ಯುಗಾದಿ ಹಬ್ಬವೆಂದರೆ ಪರಸ್ಪರ ಪ್ರೀತಿಸೋಣ, ಒಬ್ಬರಿಗೊಬ್ಬರು ಸಹಾಯ ಮಾಡೋಣ ಎಂದು ಕರೆ ನೀಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.