ಧಾರವಾಡ: ಸಂಶೋಧಕ ಹಾಗೂ ಚಿಂತಕ ಡಾ. ಎಂ ಎಂ ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಜಾಮೀನನ್ನು ಧಾರವಾಡ ಹೈಕೋರ್ಟ್ ಪೀಠ ನಿರಾಕರಿಸಿದೆ.
ಧಾರವಾಡದ ಹೈಕೋರ್ಟ್ ಪೀಠ ಪ್ರಮುಖ ಆರೋಪಿಗಳಾದ ಗಣೇಶ ಮಿಸ್ಕಿನ ಮತ್ತು ಅಮಿತ್ ಬದ್ದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ವಜಾಗೊಳಿಸಿದ. ಈ ಇಬ್ಬರು ಆರೋಪಿಗಳು ಗೌರಿ ಲಂಕೇಶ ಹತ್ಯೆಯಲ್ಲೂ ಕೂಡ ಭಾಗಿಯಾಗಿದ್ದಾರೆಂಬ ಆರೋಪ ಬಲವಾಗಿ ಕೇಳಿ ಬಂದಿದೆ. ಈ ಎಲ್ಲವನ್ನೂ ಮುಂದಿಟ್ಟುಕೊಂಡು ಧಾರವಾಡ ಹೈಕೋರ್ಟ್ ಆರೋಪಿಗಳಿಗೆ ಬೇಲ್ ಮಂಜೂರು ಮಾಡಿಲ್ಲ.