ETV Bharat / state

ಕೊರೊನಾಗೆ ಹೆದರಿ ಕರ್ತವ್ಯಕ್ಕೆ ಗೈರಾಗುತ್ತಿರುವ ಆರೋಗ್ಯ ಸಿಬ್ಬಂದಿ: ಜಿಲ್ಲಾಧಿಕಾರಿ ಖಡಕ್ ಸೂಚನೆ

ಕೊರೊನಾ ವೈರಸ್​ಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಆದ್ರೆ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಕೊರೊನಾಗೆ ಹೆದರಿ ಕರ್ತವ್ಯಕ್ಕೆ ಗೈರಾಗುತ್ತಿದ್ದಾರೆ.

District Collector Sarath. B
ಲಬುರಗಿ ಜಿಲ್ಲಾಧಿಕಾರಿ ಶರತ್. ಬಿ
author img

By

Published : Jul 28, 2020, 9:13 PM IST

ಕಲಬುರಗಿ: ಬಿಸಿಲೂರು ಕಲಬುರಗಿಯಲ್ಲಿ ಕೊರೊನಾ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಅದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಹರ ಸಾಹಸ ನಡೆಸುತ್ತಿದೆ. ಆದ್ರೆ, ಡೆಡ್ಲಿ ವೈರಸ್​ಗೆ ಹೆದರಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಬಹುತೇಕ ವೈದ್ಯರು, ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗುತ್ತಿದ್ದು, ಜಿಲ್ಲಾಡಳಿತಕ್ಕೆ ಭಾರಿ ತಲೆನೋವಾಗಿದೆ. ಕರ್ತವ್ಯಕ್ಕೆ ಗೈರಾಗುವ ವೈದ್ಯರು, ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಿಲ್ಲರ್ ವೈರಸ್​ಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಆದ್ರೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕಾದ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಕೊರೊನಾಗೆ ಹೆದರಿ ಕರ್ತವ್ಯಕ್ಕೆ ಗೈರಾಗುತ್ತಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲು ತುಂಬಾ ಕಷ್ಟವಾಗುತ್ತಿದೆ. ಕೊರೊನಾ ಹೋರಾಟದಲ್ಲಿ ಜಿಲ್ಲಾಡಳಿತಕ್ಕೆ ವೈದ್ಯರಿಂದ ಸೂಕ್ತ ಸಹಕಾರ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಶರತ್. ಬಿ ಅಸಹಾಯಕತೆ ವ್ಯಕ್ತಪಡಿಸಿದ್ರು. ಆದ್ರೆ ಇದೀಗ ಜಿಲ್ಲಾಧಿಕಾರಿ ಕಾನೂನು ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.

ಅನಗತ್ಯವಾಗಿ ಕೊರೊನಾಗೆ ಹೆದರಿ ಕರ್ತವ್ಯಕ್ಕೆ ಗೈರಾಗುವ ಖಾಸಗಿ ಹಾಗೂ ಸರ್ಕಾರಿ ವೈದ್ಯರು, ಸಿಬ್ಬಂದಿ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿಸಿ ಶರತ್ ಬಿ. ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧದ ಹೋರಾಟಕ್ಕೆ ಜಿಲ್ಲಾಡಳಿತಕ್ಕೆ ಕೈಜೋಡಿಸಿ ಅಂತಾ ವೈದ್ಯರಲ್ಲಿ ಮನವಿ ಮಾಡಿದ್ದಾರೆ.

ದೇಶದಲ್ಲಿಯೇ ಕಲಬುರಗಿಯಲ್ಲಿ ಮೊದಲ ಬಲಿ ಪಡೆದ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿದ್ದು, ದಿನೇ ದಿನೇ ನೂರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ಈವರೆಗೆ 4,495 ಜನರನ್ನ ವಕ್ಕರಿಸಿದೆ. ಅಲ್ಲದೆ 66 ಜನರ ಪ್ರಾಣ ಕಿತ್ತುಕೊಂಡಿದೆ. ಇನ್ನೂ ಜಿಲ್ಲೆಯಲ್ಲಿ 2158 ಸಕ್ರಿಯ ಪ್ರಕರಣಗಳಿದ್ದು, ಬಹುತೇಕ ಐಸಿಯು ಕೇಂದ್ರಗಳ ಬೆಡ್​ಗಳು ಭರ್ತಿಯಾಗಿವೆ.

ಜಿಮ್ಸ್​ನಲ್ಲಿ 28, ಇ.ಎಸ್.ಐ.ನಲ್ಲಿ 30, ಬಸವೇಶ್ವರಲ್ಲಿ 24 ಐಸಿಯು ಬೆಡ್​ಗಳಿದ್ದು, ಬಹುತೇಕ ಆಸ್ಪತ್ರೆಯಲ್ಲಿ ಬೆಡ್ ಭರ್ತಿಯಾಗಿವೆ. ಹೆಚ್ಚುವರಿಯಾಗಿ ಟ್ರಾಮಾ ಕೇರ್ ಸೆಂಟರ್​ನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅಲ್ಲಿಯೂ ಐಸಿಯು ವ್ಯವಸ್ಥೆ ಮಾಡಿ 30 ಬೆಡ್ ಹಾಕಲಾಗಿದೆ.

ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಐಸಿಯು ಬೆಡ್​​ಗಳ ಕೊರೆತೆ ಕೂಡ ಎದುರಾಗಿದೆ. ಖಾಸಗಿ ಆಸ್ಪತ್ರೆಗಳು ಒಂದೆಡೆ ಐಸಿಯು ಬೆಡ್ ನೀಡಲು ಹಿಂದೇಟು ಹಾಕುತ್ತಿವೆ. ಅಲ್ಲದೆ ಕೊರೊನಾ ವಾರ್ಡ್​​ಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯ, ಸಿಬ್ಬಂದಿ ಹಿಂದೇಟು ಹಾಕುತ್ತಿರುವುದು ಜಿಲ್ಲಾಡಳಿತಕ್ಕೆ ಸಿಕ್ಕಾಪಟ್ಟೆ ತಲೆ ನೋವಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ಶರತ್, ಸೋಂಕಿತರ ಚಿಕಿತ್ಸೆಗೆ ತೊಂದರೆ ಆಗದಂತೆ ನೋಡಿಕೊಳ್ಳಲು, ಕರ್ತವ್ಯಕ್ಕೆ ಗೈರಾಗುವ ವೈದ್ಯ, ಸಿಬ್ಬಂದಿ ವಿರುದ್ದ ಕಾನೂನು ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೊರೊನಾ ಕಾಟ ಒಂದೆಡೆಯಾದ್ರೆ, ಜಿಲ್ಲಾಡಳಿತಕ್ಕೆ ಕೊರೊನಾ ಹೋರಾಟದಲ್ಲಿ ವೈದ್ಯರ ಸಹಕಾರ ಸಿಗದಿರುವುದು ತಲೆನೋವಾಗಿದೆ. ವೈದ್ಯ ನಾರಾಯಣೋ ಹರಿ ಅನ್ನೋ ಮಾತಿನಂತೆ, ವೈದ್ಯರು ಇಂತಹ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಹಿಂದೇಟು ಹಾಕದೆ, ತಮ್ಮ ಕರ್ತವ್ಯ ನಿಭಾಯಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.