ETV Bharat / state

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹರಕೆಯ ಕುರಿ: ಕುಮಾರಸ್ವಾಮಿ - ಕಲಬುರಗಿಯ ಕಡಣಿ ಗ್ರಾಮ

ಕಲಬುರಗಿಯಲ್ಲಿ ಪಂಚರತ್ನ ರಥ ಯಾತ್ರೆ- ನಗರದಲ್ಲಿ ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ - ಸಿದ್ದರಾಮಯ್ಯರಿಗೆ ಕೋಲಾರ ಕ್ಷೇತ್ರ ಸೇಫ್​ ಅಲ್ಲ ಎಂದ ಹೆಚ್​ಡಿಕೆ

pancharatna rath yatra
ಕಲಬುರಗಿಯಲ್ಲಿ ಪಂಚರತ್ನ ರಥ ಯಾತ್ರೆ
author img

By

Published : Jan 14, 2023, 9:38 AM IST

ಕಲಬುರಗಿ: ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಹರಕೆಯ ಕುರಿ ಮಾಡಲಾಗುತ್ತಿದೆ. ಕೋಲಾರ ಕ್ಷೇತ್ರದಲ್ಲಿ ಅವರನ್ನು ಚುನಾವಣೆಗೆ ನಿಲ್ಲಿಸುವ ಮೂಲಕ ಅವರ ಪಕ್ಷದವರೇ ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದರು. ಕಲಬುರಗಿಯ ಕಡಣಿ ಗ್ರಾಮದಲ್ಲಿ ಸಾಗುತ್ತಿರುವ ಪಂಚರತ್ನ ರಥ ಯಾತ್ರೆ ವೇಳೆ ಮಾಧ್ಯಮದೊಂದಿಗೆ‌ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಕೋಲಾರದಲ್ಲಿ ಸ್ಪರ್ಧಿಸಲು ಯಾರು ಒತ್ತಡ ಹಾಕಿದ್ದಾರೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯರಿಗೆ ಕೋಲಾರ ಕ್ಷೇತ್ರವಂತೂ ಸೇಫ್​ ಅಲ್ಲ. ಒಂದು ವೇಳೆ ಅವರು ಅಲ್ಲೇ ಸ್ಪರ್ಧಿಸಿದರಂತೂ ಹರಕೆಯ ಕುರಿ ಆಗುವುದರಲ್ಲಿ ಸಂಶಯವಿಲ್ಲ ಎಂದರು.

ನಾನು ಕೋಲಾರದಲ್ಲಿ ಸುತ್ತಾಡಿ ಜನರ ಭಾವನೆಯನ್ನು ತಿಳಿದುಕೊಂಡಿದ್ದೇನೆ. ಅಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮತ ಪಡೆಯುವ ಶಕ್ತಿ ಇಲ್ಲ. ಅದಕ್ಕಾಗಿಯೇ ಸಿದ್ದರಾಮಯ್ಯ ಅವರನ್ನು ಬಲವಂತವಾಗಿ ಕೋಲಾರದಲ್ಲೇ ನಿಲ್ಲಿಸಲು ಹೊರಟಿದ್ದಾರೆ. ಇನ್ನು ಅವರನ್ನು ದೇವರೇ ಕಾಪಾಡಬೇಕು ಎಂದು ನುಡಿದರು. 3ಬಿ ಮೀಸಲಾತಿಯನ್ನು 2ಡಿ ಸೇರ್ಪಡೆಗೆ ಹೈಕೋರ್ಟ್​ ತಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 3ಬಿ ಯನ್ನು 2ಡಿ ಗೆ ಘೋಷಣೆ ಮಾಡಿ ಸರ್ಕಾರ ಕಣ್ಣಿಗೆ ಮಣ್ಣೆರಚಿದೆ. ಹಲವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಆದರೆ ಇವರು ಮಾತ್ರ ಮೂಗಿಗೆ ತುಪ್ಪ ಸವರದೇ ಹಣೆ ಮೇಲೆ ಸವರಿಕೊಂಡು ವಾಸನೆ ಬಾರದಂತೆ ನೋಡಿಕೊಂಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಸರ್ಕಾರ ರಂಗ ಅನ್ನೋ ಹೆಸರನ್ನು ಮಂಗ ಮಾಡಿ ದೋಖಾ ಮಾಡಿದೆ ಎಂದು ಟೀಕಿಸಿದರು.

pancharatna rath yatra
ಕಲಬುರಗಿಯಲ್ಲಿ ಪಂಚರತ್ನ ರಥ ಯಾತ್ರೆ

ಇದನ್ನೂ ಓದಿ: ರಾಜ್ಯದಲ್ಲಿರುವುದು ಜನಾಶೀರ್ವಾದದ ಸರ್ಕಾರವಲ್ಲ, ಅಪರೇಷನ್​ ಕಮಲದ ಸರ್ಕಾರ: ಹೆಚ್​ಡಿ ಕುಮಾರಸ್ವಾಮಿ

ಪಂಚರತ್ನ ರಥ ಯಾತ್ರೆಗೆ ಬೆಂಬಲ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಳೆದೊಂದು ವಾರದಿಂದ ಕಲ್ಯಾಣ ಕರ್ನಾಟಕದ ಬೀದರ್ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಮೂಲಕ ಹಲವು ಕ್ಷೇತ್ರಗಳಿಗೆ ಸಂಚರಿಸಿ ಜನರ ಮನ ತಲುಪಲು ಪ್ರಯತ್ನ‌ ಮಾಡುತ್ತಿದ್ದಾರೆ. ಪಂಚರತ್ನ ಯಾತ್ರೆ ಕಲಬುರಗಿ‌ ಜಿಲ್ಲೆಯ ಹಲವೆಡೆ ಸಂಚರಿಸಿ ಶುಕ್ರವಾರ ನಗರಕ್ಕೆ ತಲುಪಿತು. ಬಳಿಕ ದಕ್ಷಿಣ ಉತ್ತರ ಮತಕ್ಷೇತ್ರದಲ್ಲಿ ಸಂಚರಿಸಿ ಪ್ರಚಾರ ಕೈಗೊಂಡರು. ಕಲಬುರಗಿ ನಗರದ ಸರ್ಧಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ನೆಟೆ ರೋಗದಿಂದ ಹಾನಿಯಾದ ರೈತರ ಬೆಳೆಗೆ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ಮೂರು ದಿನಗಳಿಂದ ಜಿಲ್ಲೆಯ ಆಳಂದ, ಚಿಂಚೋಳಿ, ಸೇಡಂ, ಅಫಜಲಪುರ, ಕಲಬುರಗಿ ತಾಲೂಕಿನಲ್ಲಿ ಸಂಚರಿಸಿದ ಕುಮಾರಸ್ವಾಮಿ ಪಂಚರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಆಳಂದದ ಜನತೆ ತೊಗರಿ ಕಾಳಿನ ಬೃಹತ್ ಹಾರವನ್ನು ಹೆಚ್​ಡಿಕೆಗೆ ಹಾಕಿ ಸ್ವಾಗತಿಸಿದರು. ಸೇಡಂ ಪಟ್ಟಣದಲ್ಲಿ ಕಡಲೆ ಗಿಡಗಳಿಂದ ತಯಾರಿಸಿದ ಹಾರ, ಕಲಬುರಗಿ ಸೇರಿದಂತೆ ಇತರೆ ಕಡೆಗಳಲ್ಲಿ ಬೃಹತ್ ಗಾತ್ರದ ಹೂವಿನ ಹಾರವನ್ನು ಹಾಕಲಾಯಿತು. ಯಾತ್ರೆ ಸಂಚರಿಸಿದಲ್ಲೆಲ್ಲಾ ಮಹಿಳೆಯರು ಆರತಿ ಮಾಡಿ ಸ್ವಾಗತಿಸಿಕೊಂಡರು‌. ಒಟ್ಟಾರೆ ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆಗೆ ಜನ ಜಾತ್ರೆಯೇ ಹರಿದು ಬಂದಿತ್ತು.

ಇದನ್ನೂ ಓದಿ: ಸಾಲಕ್ಕೆ ಜೀವ ಕಳ್ಕೋಬೇಡಿ, 4 ತಿಂಗಳು ಸಹಿಸ್ಕೊಳ್ಳಿ, ನಾನೇ ಕಷ್ಟ ಪರಿಹರಿಸ್ತೇನೆ: ಕುಮಾರಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.