ಕಲಬುರಗಿ: ಸದನದಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಮಾಡಿದ್ದೇವೆ. ನಾಳೆ ಯಾವ ವಿಷಯ ಅಂತ ಗೊತ್ತಾಗುತ್ತದೆ. ಸರ್ಕಾರದ ಸ್ವೇಚ್ಚಾಚಾರ, ಕಾನೂನು ಬಾಹಿರ ತೀರ್ಮಾನ ಬಗ್ಗೆ ಕಲಾಪದಲ್ಲಿ ಚರ್ಚೆ ಮಾಡುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್ಡಿಕೆ, ಹಿಟ್ ಅಂಡ್ ರನ್, ಗಾಳಿಯಲ್ಲಿ ಗುಂಡು ಹೊಡೆಯೋದು ಇಲ್ಲ. ನನ್ನನ್ನು ಓರ್ವ ಸಚಿವ ಕೆಣಕಿದ್ದಾರೆ. ಏನು ಮಾಡ್ತಾರೆ ಕುಮಾರಸ್ವಾಮಿ ಅಂತ ಹೇಳಿದ್ದಾರೆ. ಅದರ ಒಂದು ಶ್ಯಾಂಪಲ್ ಅನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದರು.
ಶಿವಮೊಗ್ಗದಲ್ಲಿ ಶಂಕಿತ ಉಗ್ರರು ಪತ್ತೆ ವಿಚಾರ: ಶಿವಮೊಗ್ಗದಲ್ಲಿ ಶಂಕಿತ ಉಗ್ರರು ಪತ್ತೆ ಚಟುವಟಿಕೆ ಪ್ರಾರಂಭವಾಗಿರುವ ವಿಚಾರವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ವಿಚಾರವಾಗಿ ಸರ್ಕಾರದ ಇಂಟಲಿಜೆನ್ಸ್ ದೊಡ್ಡ ಮಟ್ಟದಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಇಂತಹ ಘಟನೆಗಳು ನಮ್ಮ ರಾಜ್ಯಕ್ಕೆ ಒಳ್ಳೆಯದಲ್ಲಾ. ಇಂತಹ ಶಕ್ತಿಗಳನ್ನು ಮಟ್ಟಹಾಕುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಇದೆ ವೇಳೆ ಆಗ್ರಹಿಸಿದ್ದಾರೆ.
ಹೆಚ್ಡಿಡಿ ಆರೋಗ್ಯ ವಿಚಾರಣೆ: ದೇವೇಗೌಡರನ್ನು ಅನೇಕ ರಾಜಕೀಯ ನಾಯಕರು ಭೇಟಿ ವಿಚಾರದ ಕುರಿತು ಸ್ಪಷ್ಟನೆ ನೀಡಿದ ಅವರು, ದೇವೇಗೌಡರನ್ನು ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ಚರ್ಚೆ ಮಾಡಿದ್ದಾರೆ ಅಷ್ಟೆ. ಅದರಲ್ಲಿ ಯಾವುದೇ ರಾಜಕೀಯ ಇಲ್ಲ. ಅವರು ಆರೋಗ್ಯದಿಂದ ಇದ್ದಾರೆ ಎಂದು ಹೇಳಿದರು.
ರೈತರ ಸಬ್ಸಿಡಿಯಲ್ಲೂ ಕಮಿಷನ್: ರಾಜ್ಯದ ಈಗಿನ ಸರ್ಕಾರದಲ್ಲಿ ಭ್ರಷ್ಟ ವ್ಯವಸ್ಥೆ ಬಗ್ಗೆ ಜನಸಾಮಾನ್ಯರು ಚರ್ಚೆ ಮಾಡುತ್ತಿದ್ದಾರೆ. ನಲವತ್ತು ಪರ್ಸೆಂಟೇಜ್ ಚರ್ಚೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ರೈತರಿಗೆ ನೀಡುವ ಸಬ್ಸಿಡಿಯಲ್ಲಿ ಕೂಡಾ ಕಮಿಷನ್ ಪಡೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸಿದ್ದು ಸರ್ಕಾರದಲ್ಲೂ ಭ್ರಷ್ಟಾಚಾರ: ಇಂದಿನ ಸರ್ಕಾರ ಮಾತ್ರವಲ್ಲ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲೂ ಕೂಡಾ ಭ್ರಷ್ಟಾಚಾರ ನಡೆದಿತ್ತು. ಕಾಂಗ್ರೆಸ್ ಸರ್ಕಾರಲ್ಲಿ ಕೂಡಾ ಬಹಳಷ್ಟು ಭ್ರಷ್ಟಾಚಾರ ನಡೆದಿವೆ ಎಂದು ದೂರಿದರು.
ಕೆಸಿಆರ್ ಭೇಟಿ ವಿಚಾರ: ಕುಮಾರಸ್ವಾಮಿ ಮತ್ತು ತೆಲಂಗಾಣ ಸಿಎಂ ಕೆಸಿಆರ್ ಭೇಟಿ ವಿಚಾರದ ಕುರಿತು ಸೃಷ್ಟಿಕರ್ಣ ನೀಡಿದ್ದ ಕುಮಾರಸ್ವಾಮಿ ಅವರು, ರಾಯಚೂರಿನ ಕೆಲ ಭಾಗಗಳನ್ನು ತೆಲಂಗಾಣಕ್ಕೆ ಸೇರಿಸಬೇಕು ಅನ್ನೋ ವಿಚಾರದ ಬಗ್ಗೆ ಕೆಸಿಆರ್ ಅವರನ್ನು ಭೇಟಿ ಮಾಡಿದಾಗ ಚರ್ಚೆ ಮಾಡಿದ್ದೇನೆ. ಅವರು ನಮ್ಮ ನೆಲ ಜಲದ ಬಗ್ಗೆ ಅಸಡ್ಡೆಯಾಗಿ ಮಾತನಾಡಿಲ್ಲ ಅಂತ ಹೇಳಿದ್ದಾರೆ. ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಷ್ಟ್ರದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಎಂದರು.
ಓದಿ: ಜೆಸಿಬಿ ಪಕ್ಷಗಳ ಭ್ರಷ್ಟಾಚಾರ.. ಆಮ್ ಆದ್ಮಿ ಪಾರ್ಟಿಯಿಂದ ವಿಡಂಬನಾತ್ಮಕ ವಿಡಿಯೋ ಬಿಡುಗಡೆ