ETV Bharat / state

ಕೊಲೆಗೆ ಪ್ರತೀಕಾರ : ಅಣ್ಣ ಮಾಡಿದ ತಪ್ಪಿಗೆ ತಮ್ಮನ ಬಲಿ ಪಡೆದ ದುಷ್ಕರ್ಮಿಗಳು - ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಅಣ್ಣ ಮಾಡಿದ ತಪ್ಪಿಗೆ ಪ್ರತೀಕಾರ ತೀರಿಸಿಕೊಳ್ಳಲು ಆತನ ತಮ್ಮನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ದುಷ್ಕರ್ಮಿಗಳು ಪರಾರಿಯಾದ ಘಟನೆ ಕಲಬುರಗಿ ಹೊರವಲಯದ ಕುಸನೂರ ಗ್ರಾಮದ ಬ್ರಿಡ್ಜ್ ಬಳಿ ನಡೆದಿದೆ.

murder
ಕೊಲೆ
author img

By

Published : Apr 16, 2023, 9:58 AM IST

ಕಲಬುರಗಿ : ಆತನೊಬ್ಬ ಅತಿಥಿ ಉಪನ್ಯಾಸಕ. ತಾನಾಯ್ತು ತನ್ನ ಕೆಲಸ ಆಯ್ತು ಎಂದು ಸರಳ ಜೀವನ‌ ನಡೆಸ್ತಿದ್ದ ವ್ಯಕ್ತಿ. ಏನೂ ತಪ್ಪು ಮಾಡದಿದ್ರು ಕೂಡ ಈಗ ಬರ್ಬರವಾಗಿ ಕೊಲೆಯಾಗಿ ಬೀದಿಬದಿ ಹೆಣವಾಗಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೈಕ್‌ ಮೇಲೆ‌ ಬಂದ ದುಷ್ಕರ್ಮಿಗಳು ಡಿಕ್ಕಿ ಹೊಡೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಕಲಬುರಗಿ ಹೊರವಲಯದ ಕುಸನೂರ ಗ್ರಾಮದ ಬ್ರಿಡ್ಜ್ ಬಳಿ ಇಂತಹದೊಂದು ಭಯಾನಕ ಘಟನೆ ನಡೆದಿದೆ‌.

ರವಿ ಪಟ್ಟೇದಾರ (35) ಕೊಲೆಯಾದ ವ್ಯಕ್ತಿ. ಚಿತ್ತಾಪುರ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದ ರವಿ ಕಳೆದ ಮೂರು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ರು, ಮಕ್ಕಳು ಸಹ ಆಗಿರಲಿಲ್ಲ. ಮಡದಿ, ತಾಯಿ ಸೇರಿ ಕುಟುಂಬಸ್ಥರೊಂದಿಗೆ ಕುಸನೂರ ಗ್ರಾಮದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ನೆಮ್ಮದಿಯ ಜೀವನ‌ ನಡೆಸುತ್ತಿದ್ದರು‌. ಆದ್ರೆ, ಶುಕ್ರವಾರ ಸಂಜೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬೈಕ್‌ ಮೇಲೆ ಬಂದ ದುಷ್ಕರ್ಮಿಗಳು ರವಿಗೆ ಡಿಕ್ಕಿ ಹೊಡೆದು ಆತ ನೆಲಕ್ಕೆ ಬೀಳುತ್ತಿದ್ದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದರು. ಕುಸನೂರ್ ಗ್ರಾಮದ ಹಾಗೂ ಸಂಬಂಧಿಯೇ ಆದ ಕಾಂತು, ಮರೆಪ್ಪ ಸೇರಿ ನಾಲ್ವರು ಕೊಲೆ ಮಾಡಿ‌ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಣ್ಣ ಮಾಡಿದ ತಪ್ಪಿಗೆ ತಮ್ಮನ ಬಲಿ : ರವಿ ಪಟ್ಟೇದಾರ ಕೊಲೆಗೆ ಪ್ರತೀಕಾರವೇ ಕಾರಣ ಎನ್ನಲಾಗುತ್ತಿದೆ. ಕಳೆದ ಫೆ. 8 ರಂದು ರವಿ ಪಟ್ಟೇದಾರನ ಹಿರಿಯ ಸಹೋದರ ಮಲ್ಲಿಕಾರ್ಜುನ ಎಂಬಾತ ಕುಸನೂರ ಗ್ರಾಮದಲ್ಲಿ ಸಂಬಂಧಿಯೇ ಆದ ಉದಯಕುಮಾರ ಎಂಬಾತನ ಕೊಲೆಗೈದು ಜೈಲು ಸೇರಿದ್ದಾನೆ.‌ ಇತ್ತ ಉದಯಕುಮಾರನ ಕೊಲೆಯಿಂದ ಕೋಪಗೊಂಡ ಆತನ ಕುಟುಂಬಸ್ಥರು‌ ಪ್ರತಿಕಾರ ತೀರಿಸಿಕೊಳ್ಳಲು ಹಾತೊರೆಯುತ್ತಿದ್ದರಂತೆ. ಉದಯಕುಮಾರ ಕೊಲೆಗೆ ಹಾಗೂ ರವಿಗೆ ಯಾವುದೇ ರೀತಿಯ ಸಂಬಂಧ ಇಲ್ಲದೆ ಇದ್ರೂ ಮಲ್ಲಿಕಾರ್ಜುನನ ತಮ್ಮ ಅನ್ನೋ ಒಂದೇ ಕಾರಣಕ್ಕೆ ಪ್ರತೀಕಾರಕ್ಕಾಗಿ ರವಿ ಕೊಲೆ‌ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಡದಿ ಜೊತೆ ಮಾತನಾಡುತ್ತ ಪ್ರಾಣ ಬಿಟ್ಟ ರವಿ : ರವಿ ಪಟ್ಟೇದಾರ ಎಂದಿನಂತೆ ಶುಕ್ರವಾರ ಕೂಡ ಚಿತ್ತಾಪುರ‌ಗೆ ಹೋಗಿ ಸಂಜೆ ಮರಳಿ ಬಂದಿದ್ದರು. ಬಂದವರೇ ಸಹೋದರಿ ಮನೆಯಲ್ಲಿದ್ದ ತಾಯಿಯನ್ನು ಬೈಕ್ ಮೇಲೆ ಕುಸನೂರು ಗ್ರಾಮಕ್ಕೆ ಕರೆದುತಂದು ಮನೆಗೆ ಬಿಟ್ಟಿದ್ದಾರೆ. ರಾತ್ರಿ ಎಂಟು ಗಂಟೆ ಸಮಯದಲ್ಲಿ ತಾಯಿಗೆ ಊಟ ತರಲೆಂದು ಮನೆಯಿಂದ ಕೊಂಚ ದೂರದಲ್ಲಿರುವ ಹೋಟೆಲ್‌ಗೆ ನಡೆದುಕೊಂಡು ಹೋಗಿದ್ದಾರೆ. ಹೋಗುವಾಗ ಪತ್ನಿಗೆ ಫೋನ್ ಮಾಡಿ, ಮಾತನಾಡುತ್ತ ಹೋಗಿದ್ದಾರೆ. ಮಾರ್ಗ ಮದ್ಯದಲ್ಲಿಯೇ ದುಷ್ಕರ್ಮಿಗಳು ಬೈಕ್​ಯಿಂದ ಡಿಕ್ಕಿ ಹೊಡೆದು ಕೊಲೆ‌ ಮಾಡಿ ಪರಾರಿಯಾಗಿದ್ದಾರೆ. ಆಗ ಪತ್ನಿಯ ಫೋನ್ ಕಾಲ್ ಕಟ್ ಕೂಡ ಆಗಿರಲಿಲ್ಲವಂತೆ. ಆದ್ರೆ, ಪತಿ ಮಾತನಾಡದೇ ಇದ್ದಾಗ ಕಾಲ್ ಕಟ್ ಮಾಡಿ ಮತ್ತೊಮ್ಮೆ ಪತ್ನಿ ಕರೆ ಮಾಡಿದ್ದರು. ಆಗ ಫೋನ್ ಯಾರು ಕೂಡ ರಿಸೀವ್ ಮಾಡಿಲ್ಲ. ಕೆಲ ಹೊತ್ತಿನ ಬಳಿಕ ಪತಿ ಕೊಲೆಯಾಗಿರುವ ವಿಷಯ ತಿಳಿದು ಬಂದಿದೆ.

ಇದನ್ನೂ ಓದಿ : ಮಾಫಿಯಾ ಡಾನ್​ ಅತೀಕ್​ ಅಹ್ಮದ್ ಕೊಲೆ: ಗುಂಡಿಕ್ಕಿದ ಮೂವರ ಬಂಧನ, ಯುಪಿಯಲ್ಲಿ ನಿಷೇಧಾಜ್ಞೆ ಜಾರಿ

ಆರೋಪಿಗಳ ಬಂಧನಕ್ಕೆ‌ ಜಾಲ : ರವಿ ಕೊಲೆ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕುಟುಂಬಸ್ಥರ ಅಕ್ರಂದನ‌‌ ಮುಗಿಲು ಮುಟ್ಟಿತ್ತು. ರಸ್ತೆ ಮೇಲೆಯೇ ಹೊರಳಾಡಿ ಅಳುವ ದೃಶ್ಯ ಕರಳು ಕಿತ್ತು ಬರುವಂತಿತ್ತು.‌ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು‌ ಪರಿಶೀಲನೆ‌ ಮಾಡಿದ್ದಾರೆ. ಈ‌ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.