ETV Bharat / state

ವೈರಲ್​​ ವಿಡಿಯೋ : ಗ್ರಾಮ ಪಂಚಾಯಿತಿ ಸದಸ್ಯತ್ವ ಹರಾಜು ಹಾಕಿದ ಗ್ರಾಮಸ್ಥರು..! - ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ

ಗ್ರಾಮ ಪಂಚಾಯಿತಿ ಸದಸ್ಯತ್ವ ಸ್ಥಾನವನ್ನು ಹರಾಜು ಹಾಕಿರುವ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Gram panchayat members are auctioned for unanimous selection
ವೈರಲ್​​ ವಿಡಿಯೋ : ಅವಿರೋಧ ಆಯ್ಕೆಗೆ ಗ್ರಾ.ಪಂ ಸದಸ್ಯರ ಹರಾಜು
author img

By

Published : Dec 6, 2020, 10:01 PM IST

Updated : Dec 6, 2020, 10:36 PM IST

ಕಲಬುರಗಿ: ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರ ಬರುತ್ತಿದ್ದು, ಅದರ ಸದಸ್ಯತ್ವ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡುವ ಸಲುವಾಗಿ ಹರಾಜು ಹಾಕಿದ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ವೈರಲ್​​ ವಿಡಿಯೋ : ಅವಿರೋಧ ಆಯ್ಕೆಗೆ ಗ್ರಾ.ಪಂ ಸದಸ್ಯರ ಹರಾಜು

ಗ್ರಾಮಸ್ಥರಿಂದಲೇ ಸದಸ್ಯತ್ವವನ್ನು ಅವಿರೋಧ ಆಯ್ಕೆಗೆ ಹರಾಜು ಹಾಕಿದ್ದಾರೆ ಎನ್ನಲಾಗಿದೆ. ಮೂರು ದಿನದ ಹಿಂದೆ ಗ್ರಾಮದಲ್ಲಿ ಹರಾಜು ಹಾಕಿದ್ದು, ವಾರ್ಡ್ ನಂಬರ್ 1ರ ನಾಲ್ಕು ಸ್ಥಾನಗಳಿಗೆ ಹರಾಜು ಹಾಕಿದ್ದಾರೆ. ನಾಲ್ಕು ಸ್ಥಾನಗಳನ್ನು 26.55 ಲಕ್ಷಕ್ಕೆ ಹರಾಜು ಹಾಕಲಾಗಿದೆ. ಪ್ರತಿ ಮೆಂಬರ್​​ಗೆ ಎರಡೂವರೆ ಕೋಟಿ ಅನುದಾನವಿದೆ ಅಂತಾ ಕೂಗಿ ಕೂಗಿ ಹರಾಜು ಹಾಕಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.

ಮೆಂಬರ್​​ಗಳು ಸಹ ಎರಡೂವರೆ ಲಕ್ಷದಿಂದ ಹರಾಜು ಪ್ರಕ್ರಿಯೆ ಆರಂಭಿಸಿ ಆರು ಲಕ್ಷ, ಏಳು ಲಕ್ಷದವರೆಗೂ ಬಿಡ್ ಮಾಡಿದ್ದಾರೆ. ದುಡ್ಡನ್ನು ಗ್ರಾಮದ ದೇವಸ್ಥಾನ ನಿರ್ಮಾಣಕ್ಕೆ ಜಮೆ ಮಾಡುವ ಸಲುವಾಗಿ ಹರಾಜು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೊಂದು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಯಾಗಿರುವುದರಿಂದ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ.

Last Updated : Dec 6, 2020, 10:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.