ಕಲಬುರಗಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪರ್ವ ಮುಂದುವರೆದಿದ್ದು, ಕಲಬುರಗಿ ಎಸ್.ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಕೂಡಾ ಎತ್ತಂಗಡಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹಿಂದೆ ಎಸ್ಪಿ ಶಶಿಕುಮಾರ ವರ್ಗಾವಣೆ ವೇಳೆ ಯಾದಗಿರಿ ಎಸ್ಪಿಯಾಗಿದ್ದ ಮಾರ್ಬನ್ಯಾಂಗ್ ಅವರನ್ನು ಕಲಬುರಗಿ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಅವರು ಅಧಿಕಾರ ಸ್ವಿಕಾರ ಮಾಡಿ ಒಂದು ವರ್ಷ ಆಗುವ ಮುನ್ನವೇ ಮಾರ್ಬನ್ಯಾಂಗ್ ಅವರನ್ನು ಎತ್ತಂಗಡಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ನೂತನ ಎಸ್ಪಿಯಾಗಿ ಉತ್ತರ ಕನ್ನಡ ಎಸ್ಪಿಯಾಗಿದ್ದ ಪಾಟೀಲ್ ವಿನಾಯಕ ಅವರನ್ನ ನೇಮಕಗೊಳಿಸಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.