ಕಲಬುರಗಿ: ದೈನಂದಿನಂತೆ ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಪ್ರಾರ್ಥನೆ ಮುಗಿಸಿ ಕೊಠಡಿ ಒಳಗೆ ಪ್ರವೇಶಿಸುತ್ತಿದ್ದಂತೆ ತರಗತಿಯ ಗೋಡೆ ಕುಸಿದಿದೆ. ಒಂದು ನಿಮಿಷ ತಡವಾಗಿದ್ದರೂ ಮಕ್ಕಳ ಮೇಲೆ ಗೋಡೆ ಉರುಳುತಿತ್ತು. ಗೋಡೆ ಕುಸಿಯುತ್ತಿದ್ದಂತೆ ಮಕ್ಕಳು ತರಗತಿಯಿಂದ ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಆನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 407 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 12 ಕೊಠಡಿಗಳಿದ್ದು, ಇದರಲ್ಲಿ 8 ಕೊಠಡಿಗಳು ಬಹುತೇಕ ಶಿಥಿಲಗೊಂಡಿವೆ. ಕೆಲ ಕೊಠಡಿಗಳ ಛಾವಣಿ ಬಿರುಕು ಬಿಟ್ಟು ಸಿಮೆಂಟ್ ಉದುರುತ್ತಿದೆ. ನಿತ್ಯ ಆತಂಕದಲ್ಲಿಯೇ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಜೀವ ಭಯದಲ್ಲಿಯೇ ಶಿಕ್ಷಕರು ಸಹ ಪಾಠ ಮಾಡುತ್ತಿದ್ದಾರೆ.
ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಇನ್ನಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಒಲಿಂಪಿಕ್ಸ್, ಏಷಿಯನ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದವರಿಗೆ ಸರ್ಕಾರಿ ನೌಕರಿ: ಸಿಎಂ