ETV Bharat / state

ನೌಕರಿಗೂ ದುಡ್ಡು, ಟ್ರಾನ್ಸ್‌ಫರ್‌ಗೂ ದುಡ್ಡು; ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕೆಟ್ಟು ಹೋಗಿದೆ: ಖರ್ಗೆ

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಬಗ್ಗೆ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಮಾತನಾಡಿದರು.

Mallikarjuna Kharge spoke about the irregularity in the PSI recruitment exam
ಮಲ್ಲಿಕಾರ್ಜುನ ಖರ್ಗೆ
author img

By

Published : Apr 28, 2022, 3:43 PM IST

ಕಲಬುರಗಿ: ನಾನು ಹೋಮ್ ಮಿನಿಸ್ಟರ್ ಆಗಿದ್ದಾಗ ಏಳು ಸದಸ್ಯರ ಕಮಿಟಿ ರಚಿಸಿ ಏಳು ಮಾರ್ಕ್ಸ್‌ಗಿಂತ ಜಾಸ್ತಿ ಕೊಡಬಾರದು ಎಂದು ಆದೇಶಿಸಿದ್ದೆ. ಒಳ್ಳೆಯ ಆಡಳಿತ ಕೊಟ್ಟರೆ ಒಳ್ಳೆಯ ಅಭ್ಯರ್ಥಿಗಳು ಆಯ್ಕೆ ಆಗಿ ಬರ್ತಾರೆ. ಆದ್ರೆ ಈಗ ಆಡಳಿತ ವ್ಯವಸ್ಥೆ ಕೆಟ್ಟು ಹೋಗಿದೆ, ಸಿಎಂ ವೈಯಕ್ತಿಕವಾಗಿ ತಲೆಹಾಕಿ ಕೆಲಸ ಮಾಡಬೇಕು. ಇಲ್ಲದೇ ಹೋದ್ರೆ ಕರ್ನಾಟಕದ ಆಡಳಿತ ಕೆಟ್ಟು ಹೋಗುತ್ತದೆ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಬಗ್ಗೆ ಮಾತನಾಡುತ್ತಾ, ಒಂದು ಕೋಟಿ ರೂ ಕೊಟ್ಟು ಪಿಎಸ್ಐ ಆದವನು ನೌಕರಿ ಸೇರಿದ ಮರುದಿನವೇ ಅದನ್ನು ರಿಕವರಿ ಮಾಡಲು ಮುಂದಾಗ್ತಾನೆ. ದುಡ್ಡು ಕೊಟ್ಟೇ ಟ್ರಾನ್ಸಫರ್ ಆಗುವ ವ್ಯವಸ್ಥೆ ಆಗಿದೆ ಎಂದರು.

ಒಂದು ಕಾಲದಲ್ಲಿ ಕರ್ನಾಟಕದ ಮತ್ತು ಇಲ್ಲಿನ ಪೊಲೀಸರಿಗೆ ಒಳ್ಳೆಯ ಹೆಸರಿತ್ತು. ತೆಲಗಿ ಸೇರಿ ವೀರಪ್ಪನ್‌ನಂತಹ ಕೇಸ್​​ಗಳನ್ನು ಡಿಟೆಕ್ಟ್​​ ಮಾಡಿದ್ವಿ. ಇವತ್ತು ಪೊಲೀಸ್, ನಾಳೆ‌ ಪಿಡಬ್ಲುಡಿದು ಹೀಗೆ ಎಲ್ಲಾ ಹೊರ ಬರುತ್ತೆ. ಆಡಳಿತ ಸುಧಾರಣೆ ಚೆನ್ನಾಗಿದ್ರೆ ಬಡವರಿಗೆ ನ್ಯಾಯ ಸಿಗುತ್ತೆ. ಇಲ್ಲದೇ ಹೋದ್ರೆ ಪೋಸ್ಟಿಂಗ್ ಕೊಟ್ಟವರ ಶಿಫಾರಸ್ಸಿನ ಮೇಲೆ ಬಂದ್ರೆ ಅವರು ಹೇಳಿದ್ದನ್ನು ಕೇಳಿಕೊಂಡು ಇರಬೇಕಾಗುತ್ತೆ ಎಂದು ಹೇಳಿದರು.

ಇದನ್ನೂ ಓದಿ:ಬೆಂಗಳೂರಿನವರೆಗೆ ತನಿಖೆ ನಡೆದರೆ ಪಿಎಸ್​ಐ ಅಕ್ರಮದಲ್ಲಿ ಬಿಜೆಪಿ ಪಾಲು ಬಯಲಿಗೆ ಬರಲಿದೆ: ಪ್ರಿಯಾಂಕ್ ಖರ್ಗೆ ಹೇಳಿದರು.

ಯಾರೇ ತಪ್ಪು ಮಾಡಿದ್ರೂ ಆ್ಯಕ್ಷನ್ ತೆಗೆದುಕೊಳ್ಳಿ: ನನ್ನ ಮನೆಯವರು ತಪ್ಪು ಮಾಡಿದ್ರೂ ಕ್ರಮ ತೆಗೆದುಕೊಳ್ಳಿ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ನವರು ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳಿ. ನ್ಯಾಯವಾಗಿ ತನಿಖೆ ಮಾಡಬೇಕು ಎಂದು ಸಿಐಡಿಗೆ ಕೊಟ್ಟಿದ್ದಾರೆ. ಅದನ್ನು ಸಿಐಡಿ ಅವರು ನ್ಯಾಯಯುತವಾಗಿ ನಡೆಸಬೇಕು ಎಂದು ಆಗ್ರಹಿಸಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.