ETV Bharat / state

ಲಾಕ್​ಡೌನ್​ ತಂದ ಆಪತ್ತು: ಮನನೊಂದು ಕಲಬುರಗಿಯಲ್ಲಿ ಹಣ್ಣಿನ ವ್ಯಾಪಾರಿ ಆತ್ಮಹತ್ಯೆಗೆ ಶರಣು

ರಂಜಾನ್ ಹಬ್ಬಕ್ಕೆ ಮಾರಾಟ ಮಾಡಲೆಂದು ಲಕ್ಷಾಂತರ ರೂ. ಸಾಲ ಮಾಡಿ ಮುಂಗಡವಾಗಿ ಹಣ್ಣು ಖರೀದಿಸಿದ್ದ ವ್ಯಾಪಾರಿಯೊಬ್ಬ ಲಾಕ್​ಡೌನ್​ನಿಂದ ನಷ್ಟ ಅನುಭವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

fruits vendor suicide at kalburgi
ಹಣ್ಣು ವ್ಯಾಪಾರಿ ಆತ್ಮಹತ್ಯೆ
author img

By

Published : May 22, 2020, 5:54 PM IST

ಕಲಬುರಗಿ: ಲಾಕ್​ಡಾನ್​ ಜಾರಿಯಿಂದಾಗಿ ವ್ಯಾಪಾರವಿಲ್ಲದೆ, ಜೀವನ ಸಾಗಿಸುವುದು ಕಷ್ಟವಾಗಿ ಮನನೊಂದಿದ್ದ ಹಣ್ಣಿನ ವ್ಯಾಪಾರಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮೋಮಿನ್​ಪೂರ್​ ಬಡಾವಣೆಯಲ್ಲಿ ನಡೆದಿದೆ.

ಅಬ್ದುಲ್ ಖದೀರ್ (32) ನೇಣಿಗೆ ಶರಣಾದ ವ್ಯಾಪಾರಿ. ರಂಜಾನ್ ಹಬ್ಬಕ್ಕೆ ಮಾರಾಟ ಮಾಡಲೆಂದು ಲಕ್ಷಾಂತರ ರೂ. ಸಾಲ ಮಾಡಿ ಮುಂಗಡವಾಗಿ ಹಣ್ಣು ಖರೀದಿಸಿದ್ದ. ಆದರೆ ಲಾಕ್​ಡೌನ್ ಪ್ರಾರಂಭವಾದ ಬಳಿಕ ಹಣ್ಣು ಮಾರಾಟ ಮಾಡಲಾಗಿಲ್ಲ. ಇದರಿಂದ ಜೀವನ ಸಾಗಿಸಲಾಗದೆ, ನಷ್ಟ ಉಂಟಾಗಿ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.