ಕಲಬುರಗಿ: ದೇಶದಲ್ಲಿ ಲೂಟ್ ಇಂಡಿಯಾ, ಸೆಲ್ ಸರ್ಕಾರ ನಡಿತಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಹಣಕಾಸು ಸಚಿವರು ದೇಶ ಕಂಡ ಜ್ಞಾನಿಯಿಲ್ಲದ ಮಂತ್ರಿ, ಉತ್ತಮ ಯೋಜನೆಗಳನ್ನ ಹಾಕಿಕೊಂಡು ಜನರಿಗೆ ಅನುಕೂಲಕರ ಯೋಜನೆ ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಿದೆ. ಆದರೆ, ಕೇಂದ್ರ ಹೆಚ್ಚೆಚ್ಚು ಟ್ಯಾಕ್ಸ್ ಕಲೆಕ್ಟ್ ಮಾಡಿ ಸಾರ್ವಜನಿಕರ ಜೇಬು ಖಾಲಿ ಮಾಡ್ತಿದೆ. ಈ ಮಧ್ಯೆ ಕೆಲ ಭಕ್ತರು ಪೆಟ್ರೋಲ್ ಬೆಲೆ ಎಷ್ಟೇ ಆಗಲಿ ನಾವು ಖರೀದಿ ಮಾಡ್ತೇವಿ ಅಂತಿದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗಿಕರಣ ವಿರುದ್ಧ ಹರಿಹಾಯ್ದ ಖಾದರ್ : ತಾಳಿ ಅಡವಿಟ್ಟು ಜೀವನ ನಡೆಸೋ ಪರಿಸ್ಥಿತಿ ಬಿಜೆಪಿ ಸರ್ಕಾರ ತಂದಿಟ್ಟಿದೆ. ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನ, ಸಂಸ್ಥೆಗಳನ್ನ ಖಾಸಗೀಕರಣ ಮಾಡಲಾಗಿದೆ. ಏರ್ಪೋರ್ಟ್ಗಳನ್ನೂ ಖಾಸಗಿಕರಣ ಮಾಡಿ ದೇಶದ ಸಂಪತ್ತು ಲೂಟಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾದ ಆರ್ಥಿಕ ನೀತಿಯಿಲ್ಲದ ಕಾರಣ ಯೋಜನೆಗಳ ಸಫಲವಾಗ್ತಿಲ್ಲ ಎಂದು ದೂರಿದರು.
ಬಿಜೆಪಿಯದ್ದು ಬಂದೂಕು ಸಂಸ್ಕೃತಿ : ಜನಾಶೀರ್ವಾದ ಹೆಸರಲ್ಲಿ ಜನಸಾಮಾನ್ಯರ ಹತ್ತಿರ ಹೋಗೊದು ಬಿಟ್ಟು, ಹೋದ ಕಡೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲಾಗುತ್ತಿದೆ. ಜನಾಶೀರ್ವಾದ ಯಾತ್ರೆಯಲ್ಲಿ ಬಂದೂಕಿನಿಂದ ಸ್ವಾಗತ ಮಾಡಿಸಿಕೊಂಡಿದ್ದು ಬಿಜೆಪಿಯ ಸಂಸ್ಕೃತಿ. ಘಟನೆಯಲ್ಲಿ ಪೊಲೀಸ್ ಪೇದೆಗಳ ತಲೆದಂಡ ಮಾಡುವ ಅವಶ್ಯಕತೆ ಏನಿತ್ತು? ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದನ್ನ ಬಿಟ್ಟು ಪೇದೆಗಳ ಮೇಲೆ ಯಾಕೆ ಕ್ರಮ...? ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಸರ್ಕಾರವೇ ಮಾಡುತ್ತಿದೆ ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಇಡೀ ದೇಶದೊಳಗೆ ಐಟಿ ರಫ್ತಿನಲ್ಲಿ ನಮ್ಮ ರಾಜ್ಯವೇ No1.. ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ
ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ತನ್ನ ನಿಲುವನ್ನ ಸ್ಪಷ್ಟಪಡಿಸಲಿ. ಅಫ್ಘಾನಿಸ್ತಾನದಲ್ಲಿ ಕನ್ನಡಿಗರ ರಕ್ಷಣೆಗೆ ಈಗಾಗಲೇ ಸಿಎಂ ಹಾಗೂ ಗೃಹ ಸಚಿವರ ಜೊತೆ ಚರ್ಚಿಸಿದ್ದೇನೆ. ಅದಕ್ಕಾಗಿ ಸರ್ಕಾರ ನೋಡೆಲ್ ಅಧಿಕಾರಿಯೊಬ್ಬರನ್ನು ನಿಯೋಜಿಸಿದೆ. ಯಾರೇ ಕನ್ನಡಿಗರು ಅಫ್ಘಾನಿಸ್ತಾನದಲ್ಲಿ ಸಿಲುಕಿರಲಿ, ಅಂಥವರ ರಕ್ಷಣೆ ಸರ್ಕಾರ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು