ಕಲಬುರಗಿ: ರಾಜ್ಯ ಸರ್ಕಾರಕ್ಕೆ ಕೊರೊನಾ ವಿಚಾರದಲ್ಲಿ ಹೇಗೆ ದುಡ್ಡು ಹೊಡೀಬೇಕು ಅನ್ನೋದರಲ್ಲಿ ಆಸಕ್ತಿಯಿದೆ. ಆದರೆ, ಕೊರೊನಾ ವಿರುದ್ಧ ಹೋರಾಟ ಮಾಡುವ ಆಸಕ್ತಿಯಿಲ್ಲ ಎಂದು ಮಾಜಿ ಸಚಿವ/ ಕಾಂಗ್ರೆಸ್ ನಾಯಕ ಕಿಡಿಕಾರಿದ್ದಾರೆ.
ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಲಾಕ್ಡೌನ್ ಮಾಡುವಲ್ಲೂ ಸರ್ಕಾರ ಯಶಸ್ಸು ಕಂಡಿಲ್ಲ ಎಂದು ಟೀಕಿಸಿದರು.
ಕಲ್ಯಾಣ ಕರ್ನಾಟಕವನ್ನು ಮರೆತ ಸರ್ಕಾರ:
ಕೊರೊನಾ ನಿಯಂತ್ರಣದಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಸೋಂಕಿತರಿಗೆ ಹೊರಗಡೆಯಿಂದ ಔಷಧ ತುರುವಂತೆ ಸೂಚಿಲಾಗುತ್ತಿದೆ. ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯಿದೆ. ಹೀಗಾಗಿ ಕೆಲ ಸೋಂಕಿತರು ಪಕ್ಕದ ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕು ಕೇಂದ್ರಗಳಲ್ಲಿ ಇನ್ನೂ ಕೋವಿಡ್ ಕೇರ್ ಸೆಂಟರ್ ಆರಂಭಿಸಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಕೇಳಿದ್ರೆ ಕಾಂಗ್ರೆಸ್ನವರು ರಾಜಕೀಯ ಮಾಡುತ್ತಾರೆ ಅಂತಾರೆ.
ಇಎಸ್ಐ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಒಂದೇ ದಿನ ಎಂಟು ಜನರು ಮೃತಪಟ್ಟಿದ್ದಾರೆ. ಆಕ್ಸಿಜನ್ ಪೂರೈಕೆ ಮಾಡುವ ಯಂತ್ರಕ್ಕೆ ತುಕ್ಕು ಹಿಡಿದಿದೆ. ಹೀಗಾದ್ರೆ ಆಕ್ಸಿಜನ್ ಸಪ್ಲೈ ಹೇಗಾಗುತ್ತೆ? ಕಷ್ಟ ಕಾಲದಲ್ಲಿ ಕರೆಯಬೇಡಿ, ಊಟಕ್ಕೆ ಮಾತ್ರ ಮರಿಯಬೇಡಿ ಅನ್ನೋ ಹಾಗೆ ಜಿಲ್ಲೆಯ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಅಂತಾ ಹೆಸರು ಬದಲು ಮಾಡಿದ್ದು ಬಿಟ್ಟರೆ, ಈ ಭಾಗಕ್ಕೆ ಬೇರೇನೂ ಮಾಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.