ETV Bharat / state

ಭೀಮಾ ನದಿ ನೀರಿನ ಪ್ರವಾಹ: ಮನೆ ಬಿಟ್ಟು ಸುರಕ್ಷಿತ ಪ್ರದೇಶಗಳಿಗೆ ಹೊರಟ ಗ್ರಾಮಸ್ಥರು - ಸೊನ್ನ ಬ್ಯಾರೇಜ್​​

ಭೀಮಾ ನದಿಯಲ್ಲಿ ಪ್ರವಾಹದ ಭೀತಿ ಉಂಟಾಗಿದ್ದು, ಕಲಬುರಗಿ ಜಿಲ್ಲೆಯ ಹಲವು ಗ್ರಾಮಗಳು ಜಲಾವೃತಗೊಂಡಿವೆ. ವೀರ್ ಜಲಾಶಯದಿಂದ ಸೊನ್ನ ಬ್ಯಾರೇಜ್​​​ಗೆ 2 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಕಲಬುರಗಿ ಜಿಲ್ಲೆಯ ಹಲವು ಗ್ರಾಮಗಳು ಜಲಾವೃತ
ಕಲಬುರಗಿ ಜಿಲ್ಲೆಯ ಹಲವು ಗ್ರಾಮಗಳು ಜಲಾವೃತ
author img

By

Published : Oct 15, 2020, 11:02 AM IST

Updated : Oct 15, 2020, 1:34 PM IST

ಕಲಬುರಗಿ: ಮಹಾರಾಷ್ಟ್ರದಿಂದ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಭೀಮಾ ನದಿಯಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಜಿಲ್ಲೆಯಲ್ಲಿ ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಜನ ಊರು ಬಿಟ್ಟು ತೆರಳುತ್ತಿದ್ದಾರೆ.

ಮನೆ ಬಿಟ್ಟು ಸುರಕ್ಷಿತ ಪ್ರದೇಶಗಳಿಗೆ ಹೊರಟ ಗ್ರಾಮಸ್ಥರು

ಕಲಬುರಗಿ, ಅಫಜಲಪುರ, ಜೇವರ್ಗಿ, ಚಿತಾಪುರ ತಾಲೂಕಿನ ಹಲವು ಗ್ರಾಮದ ಜನರು ಮನೆ ಖಾಲಿ ಮಾಡುತ್ತಿದ್ದಾರೆ. ಅಫಜಲಪುರ ತಾಲೂಕಿನ‌ ಜೇವರ್ಗಿ ಕೆ, ಜೇವರ್ಗಿ ಬಿ, ದಿಗ್ಸಂಗ್, ತೇಲೂನಿ, ಶಿರವಾಳ, ಬಂಕಲಗಾ, ನಂದರ್ಗಾ ಗ್ರಾಮದ ಜನರು ದನಕರುಗಳ ಸಮೇತ ಊರು ಬಿಟ್ಟಿದ್ದಾರೆ. ಈಗಾಗಲೇ ಮಹಾರಾಷ್ಟ್ರದ ಉಜನಿ ಹಾಗೂ ವೀರ್ ಜಲಾಶಯದಿಂದ ಸೊನ್ನ ಬ್ಯಾರೇಜ್​​​ಗೆ 2 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ.

ಸೊನ್ನ ಬ್ಯಾರೇಜ್​​ನಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ಭೀಮಾ ನದಿಗೆ 2,23,000 ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಮಹಾರಾಷ್ಟ್ರದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವ ಸಾಧ್ಯತೆ ಇದ್ದು, ಮತ್ತಷ್ಟು ಗ್ರಾಮಗಳು ಜಲ ಕಂಟಕಕ್ಕೆ ಒಳಗಾಗಲಿವೆ.

Last Updated : Oct 15, 2020, 1:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.