ಕಲಬುರಗಿ: ಇತ್ತೀಚೆಗೆ ಶಂಕಿತ ಕೊರೊನಾ ಸೋಂಕಿನಿಂದ ಕಲಬುರಗಿಯಲ್ಲಿ ಸಾವಿಗೀಡಾಗಿದ್ದ ವೃದ್ಧನ ಸಾವಿಗೆ ಮಾರಕ ಸೋಂಕು ಕಾರಣ ಎಂಬುದು ದೃಢಪಟ್ಟಿದೆ. ಈ ವಿಷಯವನ್ನು ಆರೋಗ್ಯ ಇಲಾಖೆಯೇ ಖಚಿತಪಡಿಸಿದೆ.
-
ಕಲಬುರ್ಗಿಯಲ್ಲಿ ಮೊನ್ನೆ ಮೃತಪಟ್ಟ 76 ವರ್ಷದ #COVID19 ಶಂಕಿತರಿಗೆ ಸೋಂಕು ತಗಲಿದ್ದು ಖಚಿತವಾಗಿದೆ. ಇವರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಗುರುತಿಸಿ ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗಿದೆ.
— B Sriramulu (@sriramulubjp) March 12, 2020 " class="align-text-top noRightClick twitterSection" data="
">ಕಲಬುರ್ಗಿಯಲ್ಲಿ ಮೊನ್ನೆ ಮೃತಪಟ್ಟ 76 ವರ್ಷದ #COVID19 ಶಂಕಿತರಿಗೆ ಸೋಂಕು ತಗಲಿದ್ದು ಖಚಿತವಾಗಿದೆ. ಇವರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಗುರುತಿಸಿ ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗಿದೆ.
— B Sriramulu (@sriramulubjp) March 12, 2020ಕಲಬುರ್ಗಿಯಲ್ಲಿ ಮೊನ್ನೆ ಮೃತಪಟ್ಟ 76 ವರ್ಷದ #COVID19 ಶಂಕಿತರಿಗೆ ಸೋಂಕು ತಗಲಿದ್ದು ಖಚಿತವಾಗಿದೆ. ಇವರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಗುರುತಿಸಿ ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗಿದೆ.
— B Sriramulu (@sriramulubjp) March 12, 2020
ಉಮ್ರಾ ಯಾತ್ರೆಗಾಗಿ ಜನವರಿ 26ರಂದು ತೆರಳಿದ್ದ ಕಲಬುರಗಿ ಮೂಲದ ವೃದ್ಧ ಮೆಕ್ಕಾಗೆ ತೆರಳಿದ್ದು, ಮಾರ್ಚ್ 6ರಂದು ವಾಪಸ್ ಬಂದಿದ್ದರು. ಈ ವೇಳೆ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದ ಕಾರಣ, ಕೊರೊನಾ ಶಂಕೆ ಮೇರೆಗೆ ಹೈದರಾಬಾದ್ಗೆ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು. ಆದರೆ, ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದರು.
ಕೊರೊನಾ ಸೋಂಕಿನ ಕುರಿತು ಅಧಿಕೃತ ವರದಿ ಪ್ರಕಟವಾಗದ ಹಿನ್ನೆಲೆಯಲ್ಲಿ ಇನ್ನೂ ದೃಢಪಟ್ಟಿರಲಿಲ್ಲ. ಆದರೆ, ಗಂಟಲಿನ ದ್ರವವನ್ನು ತೆಗೆದು ಕಳುಹಿಸಲಾಗಿದ್ದ ಮಾದರಿಯನ್ನು ಪರಿಶೀಲಿಸಿರುವ ವೈದ್ಯರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿರುವುದಾಗಿ ದೃಢಪಟಿಸಿದ್ದರು.