ಕಲಬುರಗಿ: ಕೃಷಿ ಉತ್ಪನ್ನ ಮಾರುಕಟ್ಟೆ ವತಿಯಿಂದ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ಹಸ್ತಾಂತರಿಸಲಾಯಿತು.
ಕೋವಿಡ್-19 ವೈರಾಣು ನಿಯಂತ್ರಿಸಲು ಹಾಗೂ ಪ್ರಯೋಗಾಲಯ ಸ್ಥಾಪನೆಗೆ ದಾನಿಗಳು ಮುಂದೆ ಬಂದು ಸಿಎಂ ಪರಿಹಾರ ನಿಧಿಗೆ ಹಣ ಜಮಾ ಮಾಡುವ ಮೂಲಕ ಸರ್ಕಾರಕ್ಕೆ ನೆರವಾಗುವಂತೆ ಸಿಎಂ ಕೋರಿದ ಹಿನ್ನೆಲೆ ಕಲಬುರಗಿ ಎಪಿಎಂಸಿ ವತಿಯಿಂದ 50 ಲಕ್ಷ ದೇಣಿಗೆ ನೀಡಲಾಗಿದೆ.
![ಸಿಎಂ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ](https://etvbharatimages.akamaized.net/etvbharat/prod-images/kn-klb-03-50lakh-check-ka10021_26032020204857_2603f_1585235937_966.jpg)
ಚೆಕ್ಅನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಜಿಲ್ಲಾಧಿಕಾರಿಗೆ ಬಿ.ಶರತ್ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಗ್ರಾಮೀಣ ಮತಕ್ಷೇತ್ರ ಶಾಸಕ ಬಸವರಾಜ್ ಮತ್ತಿಮೂಡ ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.