ETV Bharat / state

ಅಜ್ಜ-ಅಜ್ಜಿ ಬಳಿಯಿದ್ದ ಇಬ್ಬರು ಮಕ್ಕಳ ಕರೆತಂದು ಕೊಂದ ಅಪ್ಪ: ಆಟೋದಲ್ಲಿ ಶವ ಇರಿಸಿ ಸುತ್ತಾಟ! - auto driver father kills his girl childs

ಕಲಬುರಗಿಯಲ್ಲಿ ಅಜ್ಜ-ಅಜ್ಜಿ ಮನೆಯಲ್ಲಿದ್ದ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಂದು ಪಾಪಿ ತಂದೆಯೊಬ್ಬ ಕೊಲೆ ಮಾಡಿದ್ದಾನೆ.

father-killed-his-two-girl-child-in-kalaburagi
ಅಜ್ಜ-ಅಜ್ಜಿ ಬಳಿಯಿದ್ದ ಇಬ್ಬರು ಮಕ್ಕಳನ್ನು ಕರೆತಂದು ಕೊಂದ ಪಾಪಿ ಅಪ್ಪ: ಆಟೋದಲ್ಲಿ ಶವಗಳ ಇರಿಸಿ ಸುತ್ತಾಟ!
author img

By

Published : Jun 29, 2022, 8:46 PM IST

ಕಲಬುರಗಿ: ಪ್ರೀತಿಸಿ ಮದುವೆಯಾದ ಹೆಂಡ್ತಿ ಮತ್ತೊಬ್ಬನ ಜತೆ ಓಡಿ ಹೋದಳೆಂಬ ಸಿಟ್ಟಿನಲ್ಲಿ ವ್ಯಕ್ತಿಯೋರ್ವ ತನ್ನ ಇಬ್ಬರು ಹೆಣ್ಣು ಮಕ್ಕಳನ್ನೇ ಕೊಲೆಗೈದಿದ್ದಾನೆ. ಅಲ್ಲದೇ, ದಿನವಿಡೀ ತನ್ನ‌ ಆಟೋದಲ್ಲೇ ಶವಗಳನ್ನು ಇಟ್ಟುಕೊಂಡು ಓಡಾಡಿರುವ ಘಟನೆ ಕಲಬುರಗಿಯ ಚೌಕ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜೀವಗಾಂಧಿ ನಗರ ಬಡಾವಣೆಯ ನಿವಾಸಿ ಲಕ್ಷ್ಮೀಕಾಂತ್ ಎಂಬಾತನೇ ಮಕ್ಕಳನ್ನು ಕೊಂದ ಪಾಪಿ ತಂದೆ. ಸೋನಿ (11), ಮಯೂರಾ (10) ಕೊಲೆಯಾದ ಮಕ್ಕಳು.

ಆಟೋ ಚಾಲಕನಾದ ಲಕ್ಷ್ಮೀಕಾಂತ್​ ಹಾಗೂ ಅಂಜಲಿ ಎಂಬ ಯುವತಿ ಪರಸ್ಪರ ಪ್ರೀತಿಸಿ‌ ಮದುವೆಯಾಗಿದ್ದರು. ಇವರ ಸುಖಸಂಸಾರಕ್ಕೆ ಸಾಕ್ಷಿಯಾಗಿ ನಾಲ್ಕು ಜನ ಮಕ್ಕಳ ಸಹ ಇದ್ದಾರೆ. ಆದರೆ, ಕಳೆದ ನಾಲ್ಕು ತಿಂಗಳ ಹಿಂದೆ ಅಂಜಲಿ ತನ್ನ ನಾಲ್ಕು ಮಕ್ಕಳು ಹಾಗೂ ಪತಿಯನ್ನು ಬಿಟ್ಟು ಮತ್ತೋರ್ವನ‌‌ ಜೊತೆ ಹೋಗಿದ್ದಾಳೆ ಎನ್ನಲಾಗಿದೆ.

ಅಜ್ಜ-ಅಜ್ಜಿ ಬಳಿಯಿದ್ದ ಇಬ್ಬರು ಮಕ್ಕಳನ್ನು ಕರೆತಂದು ಕೊಂದ ಪಾಪಿ ಅಪ್ಪ

ಆಗಿನಿಂದ ಅಂಜಲಿಯ ಅಪ್ಪ-ಅಮ್ಮನೇ ನಾಲ್ಕು‌ ಮಕ್ಕಳನ್ನು ತಮ್ಮ‌ ಮನೆಗೆ ಕರೆದೊಯ್ದು ಪೋಷಣೆ ಮಾಡುತ್ತಿದ್ದರು. ಈ ನಡುವೆ ಕುಡಿತದ ದಾಸನಾಗಿದ್ದ ಲಕ್ಷ್ಮೀಕಾಂತ ನಾಲ್ಕು‌ ದಿನಗಳ ಹಿಂದಷ್ಟೇ ಇಬ್ಬರು ಮಕ್ಕಳನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ ಎಂದು ಹೇಳಲಾಗಿದೆ.

ಆಟೋದಲ್ಲಿ ಶವಗಳು, ವಾಸನೆ: ತನ್ನೊಂದಿಗೆ ಇಬ್ಬರು ಮಕ್ಕಳನ್ನು ಕರೆದುಕೊಂಡ ಬಂದಿದ್ದ ಲಕ್ಷ್ಮೀಕಾಂತ ಇಬ್ಬರನ್ನೂ ಕೊಲೆ ಮಾಡಿದ್ದಾನೆ. ನಂತರ ಶವಗಳನ್ನು ತನ್ನ ಆಟೋದ ಸೀಟ್ ಹಿಂಭಾಗದಲ್ಲಿ ಬಚ್ಚಿಟ್ಟು ಬಾಡಿಗೆಗೆ ಪ್ಯಾಸೆಂಜರ್ ಕರೆದುಕೊಂಡು ಸಹ ಓಡಾಡಿದ್ದಾನೆ.

ಹೀಗೆ ಓಡಾಡಿ ಒಂದೆಡೆ ನಿಂತಾಗ ಆಟೋದಿಂದ ದುರ್ವಾಸನೆ ಬಂದಿದೆ. ಅಲ್ಲದೇ, ರಕ್ತದ ಕಲೆಗಳು ಕೂಡ ಸಾರ್ವಜನಿಕರ ಕಣ್ಣಿಗೆ ಬಿದ್ದಿವೆ. ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಟೋ ಪರಿಶೀಲನೆ ನಡೆಸಿದಾಗ ಮಕ್ಕಳ ಶವಗಳು ಪತ್ತೆಯಾಗಿವೆ. ನಂತರ ಲಕ್ಷ್ಮೀಕಾಂತ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಮಕ್ಕಳನ್ನು ತಾನೇ‌ ಕೊಲೆಗೈದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ವಿಚ್ಛೇದನ ಕೊಡಲು ನಿರಾಕರಣೆ.. ಯಾದಗಿರಿಯಲ್ಲಿ ಪತ್ನಿ ಕುಟುಂಬಕ್ಕೆ ಬೆಂಕಿ ಹಚ್ಚಿದ ಪತಿ, ಇಬ್ಬರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.