ETV Bharat / state

ನಕಲಿ ಸಹಿ ಮಾಡಿ ರೈತರ ಹೆಸರಿನಲ್ಲಿ ಮೋಸ ಆರೋಪ : ಸಹಕಾರ ಸಂಘದ ಕಾರ್ಯದರ್ಶಿಗೆ ರೈತರಿಂದ ಗೂಸಾ - ಕಲಬುರಗಿಯಲ್ಲಿ ಸಹಕಾರ ಸಂಘದ ಕಾರ್ಯದರ್ಶಿಗೆ ರೈತರಿಂದ ಗೂಸಾ

ರೈತರ ಹೆಸರಿನ ಮೇಲೆ ನಕಲಿ ಸಹಿ ಮಾಡಿದ್ದರ ಬಗ್ಗೆ ಹಾಗೂ ಸಹಕಾರ ಸಂಘವನ್ನು ದೂರುಪಯೋಗಪಡಿಸಿಕೊಂಡಿದ್ದರ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ಸಹ ಸಲ್ಲಿಸಲಾಗಿದೆ. ಆದ್ರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ರೊಚ್ಚಿಗೆದ್ದು ಗೂಸಾ ನೀಡಿದ್ದಾರೆ..

ಸಹಕಾರ ಸಂಘದ ಕಾರ್ಯದರ್ಶಿಗೆ ರೈತರಿಂದ ಗೂಸಾ
ಸಹಕಾರ ಸಂಘದ ಕಾರ್ಯದರ್ಶಿಗೆ ರೈತರಿಂದ ಗೂಸಾ
author img

By

Published : Sep 8, 2021, 9:05 PM IST

Updated : Sep 8, 2021, 10:36 PM IST

ಕಲಬುರಗಿ : ನಕಲಿ ಸಹಿ ಮಾಡಿ ರೈತರ ಹೆಸರಿನಲ್ಲಿ ಸಾಲ ಪಡೆದಿದ್ದಾನೆಂದು ಆರೋಪಿಸಿ ಸಹಕಾರ ಸಂಘದ ಕಾರ್ಯದರ್ಶಿಗೆ ಬಟ್ಟೆ ಬಿಚ್ಚಿ ಥಳಿಸಿರುವ ಘಟನೆ ಜೇವರ್ಗಿಯಲ್ಲಿ ನಡೆದಿದೆ. ಯಡ್ರಾಮಿ ತಾಲೂಕಿನ ಯಲಗೋಡ ಸಹಕಾರ ಸಂಘದ ಕಾರ್ಯದರ್ಶಿ ರಾಯಪ್ಪಗೌಡ ಹಲ್ಲೆಗೆ ಒಳಗಾದವರು.

ಸಹಕಾರ ಸಂಘದ ಕಾರ್ಯದರ್ಶಿಗೆ ರೈತರಿಂದ ಗೂಸಾ

ಜೇವರ್ಗಿ ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ರೈತರು ಬಟ್ಟೆ ಬಿಚ್ಚಿ ಥಳಿಸಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಯಪ್ಪಗೌಡ, ರೈತರ ನಕಲಿ ಸಹಿ ಮಾಡಿ ಕೋಟ್ಯಂತರ ರೂ. ಲೂಟಿ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ರೈತರ ಹೆಸರಿನ ಮೇಲೆ ನಕಲಿ ಸಹಿ ಮಾಡಿದ್ದರ ಬಗ್ಗೆ ಹಾಗೂ ಸಹಕಾರ ಸಂಘವನ್ನು ದೂರುಪಯೋಗಪಡಿಸಿಕೊಂಡಿದ್ದರ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ಸಹ ಸಲ್ಲಿಸಲಾಗಿದೆ. ಆದ್ರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ರೊಚ್ಚಿಗೆದ್ದು ಗೂಸಾ ನೀಡಿದ್ದಾರೆ.

‘ಸ್ಥಳೀಯರು ರಾಯಪ್ಪಗೌಡನ ರಕ್ಷಣೆ ಮಾಡಿದ್ದು, ಅಧಿಕಾರಿಗಳು ತಕ್ಷಣ ಕ್ರಮಕ್ಕೆ‌ ಮುಂದಾಗಬೇಕು. ಉನ್ನತ ಮಟ್ಟದ ತನಿಖೆ ನಡೆಸುವಂತೆ ರೈತರು ಆಗ್ರಹಿಸಿದ್ದಾರೆ.

Last Updated : Sep 8, 2021, 10:36 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.