ETV Bharat / state

ಕೆಮಿಕಲ್​ ಮಿಶ್ರಿತ ನೀರು ಹೊರಹಾಕುತ್ತಿರುವ ಕಾರ್ಖಾನೆ: ಕಲಬುರಗಿ ರೈತರಿಗೆ ಸಂಕಷ್ಟ

ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಸುರಿದ ಮಳೆಗೆ ರೈತರು ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಕಾರ್ಖಾನೆ ಹೊರಹಾಕುತ್ತಿರುವ ಕೆಮಿಕಲ್ ಮಿಶ್ರಿತ ನೀರಿನಿಂದ ಈಗ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಸಾಯ್ಲ್​ ಕಾರ್ಖಾನೆ
ಸಾಯ್ಲ್​ ಕಾರ್ಖಾನೆ
author img

By

Published : Aug 26, 2022, 4:56 PM IST

ಕಲಬುರಗಿ: ಜಿಲ್ಲೆಯ ಕೇರೂರು ಗ್ರಾಮದ ಬಳಿ ಇರುವ ಸಾಯ್ಲ್​ ಕಾರ್ಖಾನೆಯಿಂದ ಹೊರ ಬಿಡಲಾಗುತ್ತಿರುವ ಕೆಮಿಕಲ್​ ಮಿಶ್ರಿತ ನೀರಿನಿಂದ ರೈತರು ತೊಂದರೆಗೀಡಾಗಿದ್ದಾರೆ. ಕಾರ್ಖಾನೆಯ ಕಲುಷಿತ ನೀರು ಕುಡಿದು ಜಾನುವಾರುಗಳು ಸಾವಿಗೀಡಾಗುತ್ತಿವೆಯಂತೆ. ನೋಡಲು ಪಕ್ಕಾ ಪೆಟ್ರೋಲ್ ರೀತಿ ಇರುವ ಕಲುಷಿತ ನೀರು, ಹಳ್ಳಕ್ಕೆ ಸೇರುತ್ತಿದ್ದು ರೈತರು ತಲೆಕೆಡಿಸಿಕೊಂಡಿದ್ದಾರೆ.

ಸಾಯ್ಲ್​​ ಕಾರ್ಖಾನೆಯವರು ಮಣ್ಣು ಫಿಲ್ಟರ್ ಮಾಡಲು ಕೆಮಿಕಲ್ ಮಿಶ್ರಿತ ನೀರು ಬಳಸುತ್ತಾರೆ. ಬಳಿಕ ಫಿಲ್ಟರ್ ಮಾಡಿ ಉಳಿದ ನೀರನ್ನು ನೇರವಾಗಿ ಪಕ್ಕದ ಹಳ್ಳಕ್ಕೆ ಬಿಡುತ್ತಿದ್ದಾರೆ. ಇದರಿಂದ ಕೇರೂರು, ಕೇರೂರು ತಾಂಡ, ಆಲಗೂಡ್ ಸೇರಿ ಹಲವು ಊರಿನ ರೈತರಿಗೆ ಸಮಸ್ಯೆಯಾಗುತ್ತಿದೆ. ಕಲುಷಿತ ನೀರು ಹಳ್ಳಕ್ಕೆ ಬಿಡುತ್ತಿರುವುದರಿಂದ ಸುತ್ತ ಮುತ್ತಲಿನ ಹೊಲಗಳಲ್ಲಿ ಬೆಳೆದ ಕಬ್ಬು, ಹೆಸರು, ಉದ್ದು ಸೋಯಾಬಿನ್ ಮತ್ತಿತರ ಬೆಳೆಗಳು ಹಾಳಾಗಿವೆ. ಸುಮಾರು ಎರಡು ನೂರಕ್ಕೂ ಅಧಿಕ ಎಕರೆ ಭೂಮಿ ಸಂಪೂರ್ಣ ಹಾಳಾಗುತ್ತಿದೆ.

ಕೆಮಿಕಲ್​ ಮಿಶ್ರಿತ ನೀರು ಹೊರಹಾಕುತ್ತಿರುವ ಕಾರ್ಖಾನೆ

ಆಲಗೂಡ ಗ್ರಾಮದ ರೈತ ತನ್ನ 5 ಎಕ್ಕರೆ ಹೊಲದಲ್ಲಿ ಗುಲಾಬಿ ಹೂ ಬೆಳೆದಿದ್ದರು. ಔಷಧಿ ಸಿಂಪಡಣೆಗೆಂದು ಹಳ್ಳದ ನೀರು ಉಪಯೋಗಿಸಿದ ಕಾರಣ, ಗುಲಾಬಿ ಹೂವಿನ ಎಲೆಗಳು ಉದುರಿ, ಹೂಗಳು ಬಾಡಿ ನಿಂತಿವೆ. ಸಾಲ ಮಾಡಿ ಗುಲಾಬಿ ಹೂ ಬೆಳೆದಿದ್ದೆ. ಈಗ ಯಾವುದೇ ಉಪಯೋಗಕ್ಕೆ ಬರುತ್ತಿಲ್ಲ ಎಲ್ಲಾ ಹಾಳಾಗಿದೆ. ಸಾಯುವುದು ಒಂದೆ ಬಾಕಿ ಉಳಿದಿದೆ ಎಂದು ರೈತ ತಮ್ಮ ಅಳಲು ತೋಡಿಕೊಂಡರು.

ಇದನ್ನೂ ಓದಿ: ಬಳ್ಳಾರಿ: ಕಲುಷಿತ ನೀರು ಸೇವನೆ, 84 ಮಂದಿ ಆಸ್ಪತ್ರೆಗೆ ದಾಖಲು

ಮೂರು ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಆದ್ರೆ ಕಾರ್ಖಾನೆ ಪ್ರಾರಂಭ ಆದಾಗಿನಿಂದ ಈ ಸಮಸ್ಯೆ ಆಗುತ್ತಿದೆ. ಕಾರ್ಖಾನೆಯವರಿಗೆ ಎಷ್ಟು ಹೇಳಿದ್ರೂ ಕೇಳುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಹಳ್ಳದ ನೀರು ಕುಡಿದು ಗ್ರಾಮದ ಎಷ್ಟೋ ಜಾನುವಾರುಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.