ಸೇಡಂ: ಮೇ.4 ರವರೆಗೆ ಸೂಚಿತ ಅಂಗಡಿಗಳು ಹೊರತುಪಡಿಸಿ ಉಳಿದವು ತೆರೆದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಟ್ಟಣದಲ್ಲಿ ಪೊಲೀಸ್ ವಾಹನದ ಮೂಲಕ ಸೂಚಿಸಲಾಯಿತು.
ಪಟ್ಟಣದಲ್ಲಿ ಕಿರಾಣಿ, ಮೆಡಿಕಲ್, ಬೇಕರಿ, ಆಸ್ಪತ್ರೆ, ಹೋಟೆಲ್, ವೈನ್ಸ್, ತರಕಾರಿ ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.
ಸ್ವತಃ ಸಹಾಯಕ ಆಯುಕ್ತ ರಮೇಶ ಕೋಲಾರ ಅವರೇ ರಸ್ತೆಗಿಳಿದು ಬಹುತೇಕ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ಸರ್ಕಾರದ ಆದೇಶದನ್ವಯ ಮೇ.4 ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಅಲ್ಲಿಯವರೆಗೂ ಹೋಟೆಲ್ ಮತ್ತು ವೈನ್ಸ್ ಗಳಲ್ಲಿ ಕೇವಲ ಪಾರ್ಸಲ್ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಸೂಚಿತ ಅಂಗಡಿಗಳು ಹೊರತುಪಡಿಸಿ ಉಳಿದೆಲ್ಲವೂ ಸಂಪೂರ್ಣ ಬಂದ್ ಮಾಡಲು ನಿರ್ದೇಶಿಸಲಾಗಿದೆ.
ಕಟ್ಟುನಿಟ್ಟಿನ ಕಾನೂನು ಪಾಲಿಸಬೇಕು. ಈ ಮೂಲಕ ತಮ್ಮ ಮತ್ತು ಜನರ ರಕ್ಷಣೆ ಮಾಡಬೇಕಾಗಿದೆ. ಸರ್ಕಾರದ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್ಐ ನಾನಾಗೌಡ ಎಚ್ಚರಿಸಿದ್ದಾರೆ.