ಕಲಬುರಗಿ ಜಿಲ್ಲೆಯಲ್ಲಿ 48 ಪರಿಹಾರ ಕೇಂದ್ರ ಸ್ಥಾಪನೆ ಮಾಡಲಾಗಿದೆ: ಜಿಲ್ಲಾಧಿಕಾರಿ - ಕಲಬುರಗಿ ಜಿಲ್ಲೆಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಇಲ್ಲಿಯವರೆಗೆ ಜಿಲ್ಲೆಯಾದ್ಯಂತ ಸುಮಾರು 4819 ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಬಟ್ಟೆ-ಪಾತ್ರೆಗಳು ಹಾನಿಗೊಳಗಾಗಿವೆ. 1058 ಮನೆಗಳಿಗೂ ಹಾನಿಯಾಗಿದೆ.
ಕಲಬುರಗಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ನಿರಾಶ್ರಿತಗೊಂಡ ಜನರಿಗೆ ಜಿಲ್ಲೆಯಾದ್ಯಂತ 48 ಪರಿಸರ ಕೇಂದ್ರ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.
ಕಲಬುರಗಿ, ಕಮಲಾಪೂರ ಹಾಗೂ ಅಫಜಲಪುರ ತಾಲೂಕಿನಲ್ಲಿ ತಲಾ 3, ಆಳಂದ ತಾಲೂಕಿನಲ್ಲಿ 4, ಜೇವರ್ಗಿ ತಾಲೂಕಿನಲ್ಲಿ 1, ಚಿತ್ತಾಪುರ ಮತ್ತು ಸೇಡಂ ತಾಲೂಕಿನಲ್ಲಿ ತಲಾ 5, ಶಹಾಬಾದ್ ತಾಲೂಕಿನಲ್ಲಿ 4, ಕಾಳಗಿ ತಾಲೂಕಿನಲ್ಲಿ 8 ಹಾಗೂ ಚಿಂಚೋಳಿ ತಾಲೂಕಿನಲ್ಲಿ 12 ಸೇರಿದಂತೆ ಒಟ್ಟಾರೆ 48 ಪರಿಹಾರ ಕೇಂದ್ರ ತೆರೆದು 7603 ಜನರಿಗೆ ಆಶ್ರಯ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಾದ್ಯಂತ ಸುಮಾರು 4819 ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಬಟ್ಟೆ-ಪಾತ್ರೆಗಳು ಹಾನಿಗೊಳಗಾಗಿವೆ. 1058 ಮನೆಗಳಿಗೂ ಹಾನಿಯಾಗಿದೆ. ಇದಲ್ಲದೆ 518 ಜಾನುವಾರಗಳ ಜೀವ ಹಾನಿ ಬಗ್ಗೆಯೂ ವರದಿಯಾಗಿದೆ ಎಂದು ತಿಳಿಸಿದ್ದಾರೆ.