ETV Bharat / state

ಸರ್ಕಾರಿ ಶಾಲೆಯಲ್ಲಿ ಅನಧಿಕೃತ ಮಜರ್ ಸ್ಥಾಪನೆ: ಗ್ರಾಪಂ ಸಮ್ಮುಖದಲ್ಲೇ ಗ್ರಾಮಸ್ಥರಿಂದ ತೆರವು, ಪ್ರಕರಣ ಸುಖಾಂತ್ಯ

ಬಂದರವಾಡ ಸರ್ಕಾರಿ ಪ್ರಾಥಮಿಕ ಶಾಲೆಯ ಅನಧಿಕೃತವಾಗಿ ಸ್ಥಾಪಿಸಿದ್ದ ಮಜರ್​ಅನ್ನು ಗ್ರಾಪಂ ಶಾಲಾಡಳಿತ ಸಮ್ಮುಖದಲ್ಲಿ ಗ್ರಾಮಸ್ಥರಿಂದ ತೆರವು ಮಾಡಲಾಗಿದೆ. ಇದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಿದೆ.

bandrawad primary government  school
ಬಂದರವಾಡ ಸರ್ಕಾರಿ ಪ್ರಾಥಮಿಕ ಶಾಲೆ
author img

By

Published : Nov 26, 2022, 2:03 PM IST

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಯ ಬೀಗಮುರಿದು ಮೊಹರಂ ಕಮಿಟಿಯವರು ಕೆಲವು ತಿಂಗಳ ಹಿಂದೆ ರಾತೋರಾತ್ರಿ ಅನಧಿಕೃತವಾಗಿ ಮಜರ್ ಸ್ಥಾಪಿಸಿದ್ದರು. ಇದು ಕೋಮುಘರ್ಷಣೆ ನಾಂದಿಗೂ ಕಾರಣವಾಗಬಹುದೆಂದು ಎಚ್ಚೆತ್ತ ಗ್ರಾಮಸ್ಥರು ಗ್ರಾಪಂ ಅಧ್ಯಕ್ಷರು, ಶಾಲೆಯ ಮುಖ್ಯ ಶಿಕ್ಷಕ, ಪೊಲೀಸರ ಸಮ್ಮುಖದಲ್ಲಿ ಮಜರ್ ಅನ್ನು ಶನಿವಾರ ತೆರವುಗೊಳಿಸಿದ್ದಾರೆ. ವಿವಾದಕ್ಕೊಳಗಾಗಿದ್ದ ಸರ್ಕಾರಿ ಪ್ರಾಥಮಿಕ ಶಾಲೆಯ ಮಜರ್ ತೆರವಿನಿಂದ ಇದೀಗ ಪ್ರಕರಣ ಸುಖಾಂತ್ಯ ಕಂಡಿದೆ.

ಘಟನೆ ವಿವರ ? ಬಂದರವಾಡ ಗ್ರಾಮದ ಬಸವೇಶ್ವರ ಚೌಕ್, ಡಾ.ಬಿ ಆರ್ ಅಂಬೇಡ್ಕರ್ ಚೌಕ್, ಶಾಲೆ ಎದುರು ಇರುವ ಲಾಲಸಾಬ್ ಮಸೀದಿಯಲ್ಲಿ ಸುಮಾರು ವರ್ಷಗಳಿಂದ ಅನಧಿಕೃತವಾಗಿ ಮೊಹರಂ ಮಜರ್‌ ಸ್ಥಾಪಿಸಲಾಗಿತು. ಇದು ಸರ್ಕಾರಿ ಭೂಮಿ ಆಗಿದ್ದರಿಂದ ಗ್ರಾಪಂ ಆಡಳಿತವು ಎರಡು ತಿಂಗಳು ಹಿಂದೆ ಸೆಪ್ಟಂಬರ್ನಲ್ಲಿ ಮೊಹರಂ ಮಜರ್ ಸಹಿತ ಮಸೀದಿ ತೆರವುಗೊಳಿಸಿತು. ಆ ವೇಳೆ ಬೇರೆ ಕಡೆಗೆ ಮೊಹರಂ ಮಜರ್ ಒಯ್ಯಲಾಗದೇ, ಮೊಹರಂ ಕಮೀಟಿಯ ಕೆಲವರು ಸೆಪ್ಟೆಂಬರ್ 7 ರ ರಾತೋರಾತ್ರಿ ಪ್ರಾಥಮಿಕ ಶಾಲೆಯ ಕೊಠಡಿ ಬೀಗಮುರಿದು ಮಜರ್ ಸ್ಥಾಪಿಸಿ, ಬೀಗ ಹಾಕಿಕೊಂಡು ಹೋಗಿದ್ದರು. ಇದನ್ನು ಗಮನಿಸಿದ್ದ ಗ್ರಾಮಸ್ಥರು ತಕ್ಷಣ ಮೊಹರಂ ಮಜರ್ ತೆರವುಗೊಳಿಸಬೇಕೆಂದು ಆಗ್ರಹಿಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಸಂಬಂಧಿಸಿದ ಪಂಚಾಯ್ತಿ, ತಹಶಿಲ್ದಾರ್​, ಜಿಲ್ಲಾಡಳಿತಕ್ಕೆ ಮಜರ್ ತೆರವುಗೊಳಿಸುವಂತೆ ಗ್ರಾಮಸ್ಥರು ದೂರು ನೀಡಿದರೂ, ಕ್ರಮಕ್ಕೆ ಮುಂದಾಗಿರಲಿಲ್ಲ.

ಶ್ರೀರಾಮಸೇನೆ ಗಡುವು: ಗ್ರಾಮಸ್ಥರ ಆಗ್ರಹಕ್ಕೆ ಸ್ಪಂದಿಸಿದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ನವೆಂಬರ್ 29 ರೊಳಗೆ ಮಜರ್ ತೆರವುಗೊಳಿಸದಿದ್ದರೆ ಉಗ್ರ ಹೋರಾಟ ಸಹಿತ ಚಲೋ ಬಂದರವಾಡ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಗಡುವು ನೀಡಿದ್ದರಿಂದ ಇಂದು ಎಸ್‌ಡಿಎಂಸಿ ಅಧ್ಯಕ್ಷ, ಶಾಲೆ ಮುಖ್ಯ ಗುರುಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ಶಾಲಾ ಕೊಠಡಿಯಲ್ಲಿ ಸ್ಥಾಪಿಸಿದ್ದ ಮೊಹರಂ ಮಜರ್‌ ಮೇಲಿನ ಹಸಿರು ಬಟ್ಟೆ ತೆಗೆಯಿಸಿ ಗ್ರಾಮಸ್ಥರು ತೆರವುಗೊಳಿಸಿದ್ದಾರೆ. ಮಜರ್ ತೆರವು ವೇಳೆ ಗಾಣಗಾಪುರ ಠಾಣೆ ಪೊಲೀಸ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

ಭದ್ರತೆ ಮುಂದುವರಿಕೆ: ಯಾರೇ ಆಗಲಿ, ಯಾವ ಧರ್ಮವಾಗಲಿ ಸರ್ಕಾರಿ ಶಾಲೆಯಲ್ಲಿ ಈ ರೀತಿ ಅಕ್ರಮವಾಗಿ ಮಜರ್ ಸ್ಥಾಪಿಸಿದ್ದು ಅಕ್ಷಮ್ಯ ಅಪರಾಧ. ಬಂದರವಾಡ ಗ್ರಾಮದಲ್ಲಿ ಮಜರ್ ತೆರವುಗೊಳಿಸಿರುವ ಪ್ರಕರಣ ಸುಖಾಂತ್ಯಗೊಂಡರೂ ಸಹ ಮುಂಜಾಗ್ರತೆ ಕ್ರಮವಾಗಿ ಗ್ರಾಮದಲ್ಲಿ ಭದ್ರತೆ ಮುಂದುವರಿಸಲಾಗಿದೆ ಎಂದು ಎಸ್ ಡಿಎಂಸಿ ಅಧ್ಯಕ್ಷ ಲಕ್ಷ್ಮೀಕಾಂತ ತಿಳಿಸಿದ್ದಾರೆ.

ಇದನ್ನೂಓದಿ:ಸರ್ಕಾರಿ ಶಾಲೆಯ ಉಳಿವಿಗೆ ದೇಣಿಗೆ ಸಂಗ್ರಹ: ಮಕ್ಕಳ ಭವಿಷ್ಯಕ್ಕೆ ಬೆಳಕಾದ ಅಕ್ಷರ ಜೋಳಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.