ಕಲಬುರಗಿ: ಜಿಲ್ಲೆಯ ಅಪ್ಪಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ತಂದೆ ತಾಯಿಗೆ ಪಾದಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಪೋಷಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಮೋಟಿವೇಶನಲ್ ಸ್ಪೀಕರ್ ಸತೀಶ್ ಆರ್ ಅವರು ವಿದ್ಯಾರ್ಥಿಗಳಿಗೆ ಪಾದಪೂಜೆಯ ವಿಧಿವಿಧಾನಗಳನ್ನು ಹೇಳಿಕೊಟ್ಟರು ಹಾಗೂ ತಾಯಿಗೆ ಮಮ್ಮಿ ಎನ್ನದೆ ಅಮ್ಮ ಎಂದು ಕರೆಯಬೇಕೆಂದು ಮನವರಿಕೆ ಮಾಡಿಕೊಟ್ಟರು.
ಎಲ್ಲಾ ವಿದ್ಯಾರ್ಥಿಗಳು ಮೊದಲಿಗೆ ತಮ್ಮ ತಂದೆ ತಾಯಿಯ ಪಾದಗಳನ್ನು ತೊಳೆದು, ಕುಂಕುಮ ಹಚ್ಚಿ, ಪುಷ್ಪಗಳನ್ನಿಟ್ಟು, ಗಂಧದ ಕಡ್ಡಿ, ಕರ್ಪೂರದಾರತಿ ಬೆಳಗಿ ಆಶೀರ್ವಾದ ಪಡೆದರು. ಸತೀಶ್ ಅವರು ಕ್ರಮವಾಗಿ ಮಂತ್ರ ಘೋಷಣೆ, ಹಾಡುಗಳನ್ನು ಹಾಡಿ ಮಕ್ಕಳನ್ನು ಉತ್ತೇಜಿಸಿದರು.
ಪಾದಪೂಜೆ ನೇರವೇರಿಸಿದ ವಿದ್ಯಾರ್ಥಿನಿಯರು ಅಪ್ಪ ಅಪ್ಪ ಅಮ್ಮನ ಮಡಲಿನಲ್ಲಿ ಮಲಗಿ ಗದ್ಗತಿಕರಾಗಿ ಆನಂದಭಾಷ್ಫ ಸುರಿಸಿದರು. ಈ ದೃಶ್ಯ ಭಾರತೀಯ ಸಂಸ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಇದನ್ನು ನೋಡಿ ವೇದಿಕೆ ಮೇಲೆ ಉಪಸ್ಥಿತರಿದ್ದ ಗಣ್ಯರು ಕೂಡಾ ಆನಂದಭಾಷ್ಫ ಸುರಿಸಿದರು.
ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಸಮ ಕುಲಪತಿ ಪ್ರೊ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನಿಲಕುಮಾರ್ ಬಿಡವೆ, ಡೀನ್ ಡಾ.ಲಕ್ಷೀ ಪಾಟೀಲ್ ಮಾಕಾ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ: 48 ವರ್ಷಗಳ ನಂತರ ಹೊರಬಂದ ಜಯಚಾಮರಾಜ ಒಡೆಯರ್ ಜೀವಚರಿತ್ರೆ