ETV Bharat / state

ಕಲಬುರಗಿ: ತಾಯಿ-ಅಕ್ಕನ ಮಡಿಲಲ್ಲೇ ಪ್ರಾಣ ಬಿಟ್ಟ ಯುವಕ! - ಕಲಬುರಗಿ ವಿದ್ಯಾರ್ಥಿ ಆತ್ಮಹತ್ಯೆ ಸುದ್ದಿ,

ಎಂಜಿನಿಯರಿಂಗ್​​ ಮುಗಿಸಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿ ತಾಯಿ ಮತ್ತು ಅಕ್ಕನ ಮಡಿಲಲ್ಲೇ ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

Engineer student suicide, Engineer student suicide in Kalaburagai, Kalaburagi student suicide, Kalaburagi student suicide news, ಇಂಜಿನಿಯರ್​ ವಿದ್ಯಾರ್ಥಿ ಆತ್ಮಹತ್ಯೆ, ಕಲಬುರಗಿಯಲ್ಲಿ ಇಂಜಿನಿಯರ್​ ವಿದ್ಯಾರ್ಥಿ ಆತ್ಮಹತ್ಯೆ, ಕಲಬುರಗಿ ವಿದ್ಯಾರ್ಥಿ ಆತ್ಮಹತ್ಯೆ, ಕಲಬುರಗಿ ವಿದ್ಯಾರ್ಥಿ ಆತ್ಮಹತ್ಯೆ ಸುದ್ದಿ,
ತಾಯಿ, ಅಕ್ಕ ಮಡಿಲಲ್ಲೇ ಪ್ರಾಣಬಿಟ್ಟ ಇಂಜಿನಿಯರ್​ ವಿದ್ಯಾರ್ಥಿ
author img

By

Published : Jul 17, 2020, 11:19 AM IST

ಕಲಬುರಗಿ: ಎಂಜಿನಿಯರಿಂಗ್ ಮುಗಿಸಿದ್ದ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಬಿದ್ದಾಪೂರ ಅರಳಿಕಟ್ಟೆ ಪ್ರದೇಶದಲ್ಲಿ ನಡೆದಿದೆ.

ಪ್ರವೀಣ ಕುಮಾರ ಮೃತ ಯುವಕ. ಈತ ಕಳೆದ ವರ್ಷ ಬಿಇ ಪದವಿ ಪಡೆದು ಮನೆಯಲ್ಲಿಯೇ ಇದ್ದ. ಆದ್ರೆ ಅದೇನಾಯ್ತೋ ಗೊತ್ತಿಲ್ಲ. ಮನೆಯಲ್ಲಿಯೇ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ‌.

ತಾಯಿ, ಅಕ್ಕನ ಮಡಿಲಲ್ಲೇ ಪ್ರಾಣ ಬಿಟ್ಟ ಯುವಕ

ಘಟನೆ ವಿವರ

ಮೃತನ ತಂದೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮನೆಯಲ್ಲಿ ಅಕ್ಕ ಮತ್ತು ಅಮ್ಮ ಇಬ್ಬರೇ ಇರುವಾಗ ನೇಣಿಗೆ ಕೊರಳೊಡ್ಡಿದ್ದಾನೆ. ಈ ವೇಳೆ ನೋಡಿದ ಅಮ್ಮ ಮಗನನ್ನು ಉಳಿಸಲು ಪ್ರಯತ್ನಿಸಿದ್ದಾಳೆ.

ನೇಣು ಹಾಕಿದ ಸೀರೆಯನ್ನು ಆತನ ಅಕ್ಕ ಕತ್ತರಿಸಿ ಕೆಳಗೆ ಇಳಿಸಿದ್ದಾರೆ. ಈ ವೇಳೆ ಒಂದಿಷ್ಟು ಉಸಿರಾಡುತ್ತಿದ್ದು, ಕೂಡಲೇ ಆಸ್ಪತ್ರೆಗೆ ಸೇರಿಸುವ ಪ್ರಯತ್ನದಲ್ಲಿದ್ದರು. ಆದ್ರೆ ವಿಧಿಯಾಟಕ್ಕೆ ಅಮ್ಮ-ಅಕ್ಕನ ಮಡಿಲಲ್ಲೇ ಪ್ರವೀಣ ಅಸುನೀಗಿದ್ದಾನೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.