ಕಲಬುರಗಿ: ಸವಿತಾ ಹಾಗೂ ಹಡಪದ ಸಮಾಜದವರಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಸದ ಉಮೇಶ್ ಜಾಧವ್, ಶಾಸಕ ದತ್ತಾತ್ರೇಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲರು ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.
ಅಕ್ಕಿ, ಗೋಧಿ, ಬೇಳೆ, ಎಣ್ಣೆ ಸೇರಿ ಅಗತ್ಯ ವಸ್ತುಗಳನ್ನೊಳಗೊಂಡ 1,200 ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳ ಕಿಟ್ನ್ನು ವಿತರಿಸಲಾಯಿತು.
ತಿಪ್ಪಣ್ಣಪ್ಪ ಕಮಕನೂರ ಅವರನ್ನು ಮಾತನಾಡಿಸದ ಉಮೇಶ್ ಜಾಧವ್:
ಕಿಟ್ ವಿತರಣೆಗೆ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಸಂಸದ ಉಮೇಶ್ ಜಾಧವ್ ಮಾತನಾಡಿಸದೆ ಹೊರಟು ಹೋದರು. ನಂತರ ಶಾಸಕ ದತ್ತಾತ್ರೇಯ ಪಾಟೀಲ ಜೊತೆ ಮಾತನಾಡಿದ ಕಮಕನೂರ ಫಲಾನುಭವಿಗಳಿಗೆ ಕಿಟ್ ವಿತರಿಸಿ ಫೋಟೋ ತೆಗೆಸಿಕೊಂಡರು.
ಸಾಮಾಜಿಕ ಅಂತರ ಮರೆತ ಸಂಸದ ಉಮೇಶ್ ಜಾಧವ್:
ಕಿಟ್ ವಿತರಣೆ ವೇಳೆ ಸಂಸದ ಉಮೇಶ್ ಜಾಧವ್ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.