ಕಲಬುರಗಿ: ಪುಲ್ವಾಮಾ ಪ್ರತಿದಾಳಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಮುಖಂಡರು ಹಾಗೂ ರಾಜಕಾರಣಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೈ ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಸೇನೆ ವಿರುದ್ಧ ಮಾತನಾಡಿದವರ ಭಾವಚಿತ್ರ ಹಿಡಿದು ಕುರಿಗಳನ್ನು ತಂದು ಮೌನವಾಗಿ ಪ್ರತಿಭಟಿಸಿದರು. ನಮ್ಮ ದೇಶದ ಸೈನಿಕರ ತಮ್ಮ ಪ್ರಾಣವನ್ನೆ ಒತ್ತೆಯಿಟ್ಟು ಎದುರಾಳಿಗಳ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ನಮ್ಮ ರಾಜಕಾರಣಿಗಳು ಮತ್ತು ಮುಖಂಡರು ಸೇನೆ ಮೇಲೆಯೇ ಅನುಮಾನ ಪಡುವದಲ್ಲದೆ ಅವರ ಕುರಿತು ಅವಹೇಳನವಾಗಿ ಮಾತನಾಡುತ್ತಿದ್ದಾರೆ.
ದೇಶ ಕಾಯುವ ಸೈನಿಕರ ವಿರುದ್ಧ ಮಾತನಾಡಿರುವ ನಾಯಕರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರು ಡಿಸಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.