ETV Bharat / state

ಕೆಇಎ ನೇಮಕಾತಿ ಪರೀಕ್ಷೆ ಅಕ್ರಮದ ರೂವಾರಿ ಬಂಧನಕ್ಕೆ ತೆರಳಲು ತಡ ಮಾಡಿದ ಸಿಪಿಐ ಅಮಾನತು - etv bharat kannada

ಕೆಇಎ ನೇಮಕಾತಿ ಪರೀಕ್ಷೆ ಅಕ್ರಮದ ರೂವಾರಿಯಾಗಿರುವ ಆರ್​ ಡಿ ಪಾಟೀಲ್​ ಬಂಧನಕ್ಕೆ ತೆರಳಲು ತಡ ಮಾಡಿದ ಸಿಪಿಐ ಅನ್ನು ಕಲಬುರಗಿ ಐಜಿಪಿ ಅಮಾನತು ಮಾಡಿದ್ದಾರೆ.

ಸಿಪಿಐ ಪಂಡಿತ ಸಗರ ಅಮಾನತು
ಸಿಪಿಐ ಪಂಡಿತ ಸಗರ ಅಮಾನತು
author img

By ETV Bharat Karnataka Team

Published : Nov 22, 2023, 9:35 PM IST

ಕಲಬುರಗಿ: ಕೆ ಇ ಎ ಅಕ್ರಮದ ರೂವಾರಿ ಆರ್ ​ಡಿ ಪಾಟೀಲ್ ಅಪಾರ್ಟ್‌ಮೆಂಟ್​ ನಿಂದ ತಪ್ಪಿಸಿಕೊಂಡ ಹಿನ್ನೆಲೆ, ಕರ್ತವ್ಯ ನಿರ್ಲಕ್ಷ್ಯ ಆರೋಪದ ಅಡಿ ಸಿಪಿಐ ಪಂಡಿತ ಸಗರ ಅವರನ್ನು ಅಮಾನತು ಮಾಡಿ ಕಲಬುರಗಿ ಐಜಿಪಿ ಅಜಯ್ ಹಿಲೋರಿ ಆದೇಶ ಹೊರಡಿಸಿದ್ದಾರೆ. ವರ್ಧಾ ಅಪಾರ್ಟ್‌ಮೆಂಟ್​ನಲ್ಲಿರುವ ಮಾಹಿತಿ ಸಿಕ್ಕರು ಬಂಧನಕ್ಕೆ ತೆರಳಲು ತಡ ಮಾಡಲಾಗಿದೆ ಎಂದು ಆರೋಪ ಇದೆ.

ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸಿದ ಪ್ರಕರಣದ ಕಿಂಗ್‌ಪಿನ್ ಆರ್ ಡಿ ಪಾಟೀಲ್ ವಸತಿ ಸಮುಚ್ಚಯದಿಂದ ನ.7ರಂದು ಪರಾರಿಯಾಗಿದ್ದ. ಆತ ಕಾಂಪೌಂಡ್ ಹಾರಿ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಗರದ ಜೇವರ್ಗಿ ರಸ್ತೆಯಲ್ಲಿರುವ ವರ್ಧಾ ಅಪಾರ್ಟ್ಮೆಂಟ್​​ನಿಂದ ಆರ್ ಡಿ ಪಾಟೀಲ್ ಎಸ್ಕೇಪ್​​ ಆಗಿದ್ದು, ಈ ದೃಶ್ಯ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಪೊಲೀಸರ ಹುಡುಕಾಟದ ನಡುವೆ ಈತ ಕಲಬುರಗಿಯಲ್ಲಿಯೇ ಇದ್ದ. ಇದೇ ಫ್ಲ್ಯಾಟ್​ನಲ್ಲಿರುವ ಕುರಿತು ಜಿಲ್ಲಾ ಪೊಲೀಸರಿಗೆ ಖಚಿತ ಮಾಹಿತಿಯೂ ಸಿಕ್ಕಿತ್ತು. ಆದರೆ, ಹೋಗುವ ಮುನ್ನವೇ ಎಸ್ಕೇಪ್​ ಆಗಿದ್ದ. ಅಪಾರ್ಟ್​ಮೆಂಟ್​ನ ಹಿಂಬದಿಯ ಕಾಂಪೌಂಡ್​ಗೆ ಅಳವಡಿಸಿರುವ ಕಬ್ಬಿಣದ ಗ್ರಿಲ್‌ ಹಾರಿ ಪರಾರಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಕೆಇಎ ಪರೀಕ್ಷೆ ಹಗರಣದ ಕಿಂಗ್​ಪಿನ್ ಪಾಟೀಲ್, ಈ ಹಿಂದೆ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ರೂವಾರಿ ಕೂಡ ಆಗಿದ್ದ. ಸಿಐಡಿ ವರದಿ ಕೂಡ ಒಪ್ಪಿಸಿತ್ತು. ಪಿಎಸ್ಐ ಅಕ್ರಮ ಮಾಸುವ ಮುನ್ನವೇ ಈಗ ಕೆಇಎ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬ್ಲೂಟೂತ್ ನೀಡಿದ ಆರೋಪ ಕೂಡ ಆರ್‌ಡಿ ಪಾಟೀಲ್ ಮೇಲಿದೆ.

ಪ್ರಕರಣದ ಹಿನ್ನೆಲೆ ಬಂಧಿಸಲಿದ್ದಾರೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಪೊಲೀಸರಿಂದ ತೆಲೆಮರೆಸಿಕೊಂಡಿದ್ದ ಆರೋಪಿ ಆರ್‌ಡಿ ಪಾಟೀಲ್​ನನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿತ್ತು. ಪಾಟೀಲ್​​ ಹೊರಗಿನಿಂದಲೇ ಜಾಮೀನಿಗೆ ಯತ್ನಿಸುತ್ತಿದ್ದ ಎಂದು ವರದಿಯಾಗಿದೆ.

2021ರಲ್ಲಿ 545 ಪಿಎಸ್ಐ ಹುದ್ದೆಗಳಿಗೆ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಈ ಸಂಬಂಧ ಆರ್​ ಡಿ ಪಾಟೀಲ್ ಸೇರಿ ಹಲವರನ್ನು​ ಬಂಧಿಸಲಾಗಿತ್ತು. ಬಳಿಕ ಪಿಎಸ್ಐ ನೇಮಕಾತಿ ಅಕ್ರಮದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿತ್ತು. ಈ ಬಗ್ಗೆ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುವಾಗ ಸಿಕ್ಕಿ ಬಿದ್ದ ಅಭ್ಯರ್ಥಿಗಳೆಲ್ಲ ಆರ್ ಡಿ ಪಾಟೀಲ್ ಹೆಸರು ಬಾಯಿ ಬಿಟ್ಟಿದ್ದರು.

ಇದನ್ನೂ ಓದಿ: ಕೆಇಎ ಪರೀಕ್ಷೆ ಅಕ್ರಮದಲ್ಲಿ ಮತ್ತೆ ಮುನ್ನೆಲೆಗೆ ಬಂದ ಆರ್ ಡಿ‌ ಪಾಟೀಲ್ ಹೆಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.