ETV Bharat / state

ನಾಲ್ಕು ದಿನವಾದರೂ ಬಾರದ ಆ್ಯಂಬುಲೆನ್ಸ್: ಕೊರೊನಾ​ ಸೋಂಕಿತ ನಿವೃತ್ತ ಕಾನ್ಸ್​​​ಟೇಬಲ್​​​​ ಸಾವು - Covid infected constable death without ambulance

ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದ ನಿವೃತ್ತ ಕಾನ್ಸ್​​ಟೇಬಲ್​​ವೊಬ್ಬರ ವರದಿ ಬಂದ ದಿನವೇ ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಲ್ಲದೆ ಸಹಾಯವಾಣಿಗೂ ಕರೆ ಮಾಡಿ ಐಸೋಲೇಷನ್ ವಾರ್ಡ್​ಗೆ ಶಿಫ್ಟ್ ಮಾಡುವಂತೆ ಕೋರಿದ್ದರು. ಆದ್ರೆ ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.

Covid infected constable death without ambulance
ಕೋವಿಡ್​ ಸೋಂಕಿತ ಕಾನ್​ಸ್ಟೇಬಲ್ ಸಾವು
author img

By

Published : Jul 27, 2020, 1:26 PM IST

ಕಲಬುರಗಿ: ನಾಲ್ಕು ದಿನವಾದರೂ ಆ್ಯಂಬುಲೆನ್ಸ್ ಬಾರದ ಹಿನ್ನೆಲೆ ಕೊರೊನಾ ಸೋಂಕಿತ ನಿವೃತ್ತ ಪೊಲೀಸ್ ಕಾನ್ಸ್​​ಟೇಬಲ್​ವೊಬ್ಬರು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ‌.

ಆಳಂದ ಚೆಕ್ ಪೋಸ್ಟ್ ಬಳಿಯ ಸಿದ್ಧೇಶ್ವರ ನಗರದ 65 ವರ್ಷದ ನಿವೃತ್ತ ಪೊಲೀಸ್ ಕಾನ್ಸ್​​​ಟೇಬಲ್​​ ಮೃತಪಟ್ಟಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದ ಇವರು, ವರದಿ ಬಂದ ದಿನವೇ ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಲ್ಲದೆ ಸಹಾಯವಾಣಿಗೂ ಕರೆ ಮಾಡಿ ಐಸೋಲೇಷನ್ ವಾರ್ಡ್​ಗೆ ಶಿಫ್ಟ್ ಮಾಡುವಂತೆ ಕೋರಿದ್ದರು. ಆದ್ರೆ ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ. ಕೊನೆಗೆ ಮಾಜಿ ಶಾಸಕ ಬಿ.ಆರ್.ಪಾಟೀಲ ಹೇಳಿದ ಹಿನ್ನೆಲೆ ನಾಲ್ಕು ದಿನಗಳ ನಂತರ ನಿನ್ನೆ ಆ್ಯಂಬುಲೆನ್ಸ್ ತಂದು ಕರೆದುಕೊಂಡು ಹೋದರಾದರೂ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸಕಾಲಕ್ಕೆ ಆ್ಯಂಬುಲೆನ್ಸ್ ಬಂದಿದ್ದರೆ ಬದುಕುಳಿಯುತ್ತಿದ್ದರು‌ ಎಂದು ಸ್ಥಳೀಯರು ಹೇಳಿದ್ದಾರೆ.

ಸಹಾಯವಾಣಿಯಿಂದ ಹಿಡಿದು ಡಿಹೆಚ್ಒವರೆಗೂ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಡಿಹೆಚ್ಒಗೆ ಹೇಳಿದ ನಂತರವಷ್ಟೇ ಕರೆದೊಯ್ದಿದ್ದಾರೆ. ಜಿಲ್ಲಾಡಳಿತ ಅನಗತ್ಯ ವಿಳಂಬ ಮಾಡಿದ್ದೇ ಸಾವಿಗೆ ಕಾರಣ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.