ಕಲಬುರಗಿ : ಹಳೆ ವೈಷಮ್ಯದ ಹಿನ್ನೆಲೆ ಯುವಕನನ್ನ ಬರ್ಬರವಾಗಿ ಹತ್ಯೆಗೈದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆದೇಶ ಹೊರಡಿಸಿದೆ.
ತಾರಫೈಲ್ ನಗರದ ನಿವಾಸಿಗಳಾದ ರಾಮಚಂದ್ರ, ಸಾಗರ ಬೇಡರ್ ಹಾಗೂ ಹನುಮಾನ್ ನಗರ ನಿವಾಸಿ ಅರ್ಜುನ್ ಠಾಠೋಡ್ ಶಿಕ್ಷೆಗೆ ಗುರಿಯಾದ ಆರೋಪಿಗಳು. 2016ರಲ್ಲಿ ಈ ಮೂವರು ಅಪರಾಧಿಗಳು ನಗರದ ಹನುಮಾನ್ ನಗರದಲ್ಲಿ ರಾತ್ರಿ ವೇಳೆ ಬೀದಿ ದೀಪದ ಕೆಳಗೆ ಮಲಗಿದ್ದ ರಾಹುಲ್ ಎಂಬ ಯುವಕನನ್ನು ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು.
ಈ ಕುರಿತು ತನಿಖೆ ನಡೆಸಿದ ಅಂದಿನ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಸಿಪಿಐ ರಮೇಶ್ ಕಾಬಳೆ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ ವ್ಹಿ. ಎನ್ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 58,500 ರೂ. ದಂಡ ವಿಧಿಸಿ ಆದೇಶವನ್ನು ನೀಡಿದ್ದಾರೆ.
ಓದಿ: ರಾಜ್ಯದಲ್ಲೂ ಎರಡು ದಿನ ಶೋಕಾಚರಣೆ : ಹಲವೆಡೆ ಶ್ರದ್ಧಾಂಜಲಿ ಸಲ್ಲಿಕೆ