ETV Bharat / state

2 ವರ್ಷದ ಮಗುವಿಗೆ ಕೊರೊನಾ ಪಾಸಿಟಿವ್.. ವಾಡಿ ಪಟ್ಟಣದಲ್ಲಿ ಕಟ್ಟೆಚ್ಚರ..

ಪಿಲಕಮ್, ಕಲಕಂ‌, ಮಲ್ಲಿಕಾರ್ಜುನ ಗುಡಿ ಪ್ರದೇಶ, ಇರಾನಿ ಬಿಲ್ಡಿಂಗ್‌ ಏರಿಯಾಗಳ ಸುತ್ತ ಬ್ಯಾರಿಕೇಡ್​​ ಅಳವಡಿಕೆ ಮಾಡಲಾಗಿದೆ. ಇಲ್ಲಿಗೆ ಹೊರಗಿನವರ ಪ್ರವೇಶ ನಿರ್ಬಂಧಿಸಲಾಗಿದೆ. ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

Kalburagi
ಎರಡು ವರ್ಷದ ಮಗುವಿಗೆ ಕೊರೊನಾ ಪಾಸಿಟಿವ್
author img

By

Published : Apr 13, 2020, 3:24 PM IST

ಕಲಬುರಗಿ : ಎರಡು ವರ್ಷದ ಮಗುವಿಗೆ ಕೊರೊನಾ ಪಾಸಿಟಿವ್ ಬಂದಿರೋ ಹಿನ್ನೆಲೆಯಲ್ಲಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಬಾಲಕನ ಪೋಷಕರು ವಾಸಿಸುತ್ತಿದ್ದ ವಾಡಿ ಪಟ್ಟಣದ ಪಿಲಕಮ್ ಏರಿಯಾ ಸೇರಿ ಒಟ್ಟು ನಾಲ್ಕು ಬಡಾವಣೆಗಳಿಗೆ ಸಂಪೂರ್ಣ ದಿಗ್ಬಂಧನ ಹಾಕಲಾಗಿದೆ.

ಎರಡು ವರ್ಷದ ಮಗುವಿಗೆ ಕೊರೊನಾ ಪಾಸಿಟಿವ್​​ ಬಂದ ಹಿನ್ನೆಲೆ ವಾಡಿ ಪಟ್ಟಣದಲ್ಲಿ ಕಟ್ಟೆಚ್ಚರ..
ಪಿಲಕಮ್, ಕಲಕಂ‌, ಮಲ್ಲಿಕಾರ್ಜುನ ಗುಡಿ ಪ್ರದೇಶ, ಇರಾನಿ ಬಿಲ್ಡಿಂಗ್‌ ಏರಿಯಾಗಳ ಸುತ್ತ ಬ್ಯಾರಿಕೇಡ್​​ ಅಳವಡಿಕೆ ಮಾಡಲಾಗಿದೆ. ಇಲ್ಲಿಗೆ ಹೊರಗಿನವರ ಪ್ರವೇಶ ನಿರ್ಬಂಧಿಸಲಾಗಿದೆ. ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಪಿಲಕಮ್ ಪ್ರದೇಶದಲ್ಲಿ ಸೀಲ್‌ಡೌನ್ ಮಾಡಲು ಚಿಂತಿಸಲಾಗಿದೆ. ಅಗತ್ಯವಿದ್ದವರ ಮನೆಗೆ ಹಾಲು, ತರಕಾರಿ ಪೂರೈಕೆ ಮಾಡಲಾಗುತ್ತಿದೆ. ತಾಲೂಕು ಆಡಳಿತ, ಪುರಸಭೆ ಅಥವಾ ಪೊಲೀಸರಿಗೆ ತಿಳಿಸಿದರೆ ಸಾಮಾಗ್ರಿ ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಪಡಿತರ ಪಡೆಯದವರಿಗೆ ಮನೆ ಬಾಗಿಲಿಗೆ ತಂದು ಕೊಡುವ ವ್ಯವಸ್ಥೆ ಮಾಡಲಾಗಿದೆ. ಬಾಲಕನ ಪೋಷಕರು ಉತ್ತರಪ್ರದೇಶ ಮೂಲದವರಾಗಿದ್ದಾರೆ. ಹಲವು ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಬಾಲಕನಿಗೆ ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೋಷಕರ ಥ್ರೋಟ್ ಸ್ಯಾಂಪಲ್‌ಗಳನ್ನು ಲ್ಯಾಬ್​​ಗೆ ರವಾನೆ ಮಾಡಲಾಗಿದೆ. ಪೋಷಕರನ್ನು ಮತ್ತು ಬಾಲಕನಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಮತ್ತು ಸಿಬ್ಬಂದಿಗೂ ಹೋಂ ಕ್ವಾರಂಟೈನ್​​ನಲ್ಲಿಡಲಾಗಿದೆ.

ವಾಡಿ ಪಟ್ಟಣದಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಪಟ್ಟಣದ ಹಲವು ಬಡಾವಣೆಗಳಿಗೆ ಸಾರ್ವಜನಿಕರು ಬೇಲಿ ಹಾಕುವ ಮೂಲಕ ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ. ಪೊಲೀಸರು ಕೂಡ ಪಟ್ಟಣದ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್​​ ಹಾಕಿ ಸಂಚಾರಕ್ಕೆ ನಿರ್ಬಂಧ ಹಾಕಿದ್ದಾರೆ. ಜನರನ್ನು ಹೊರಗಡೆ ಬಾರದಂತೆ ಪಿಎಸ್ಐ ವಿಜಯಕುಮಾರ್ ಬಾವಗಿ ಅವರು ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.