ETV Bharat / state

ವಾಸವದತ್ತಾ ಕಾರ್ಖಾನೆಯ ಇಬ್ಬರಿಗೆ ಕೊರೊನಾ.. ಸೋಂಕು ದೃಢಪಟ್ಟಿದ್ದರೂ ಕೆಲಸಕ್ಕೆ ಬಂದ ಕಾರ್ಮಿಕ - Sedam Taluk of Kalaburagi District

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ವಾಸವದತ್ತಾ ಸಿಮೆಂಟ್ ಕಾರ್ಖಾನೆಯ ಇಬ್ಬರು ಗುತ್ತಿಗೆ ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕೊರೊನಾ ದೃಢಪಟ್ಟರೂ ಸಹ ಓರ್ವ ಕಾರ್ಮಿಕ ಗುರುವಾರ ಬೆಳಗ್ಗೆ ಕೆಲಸಕ್ಕೆ ಹಾಜರಾಗಿದ್ದ ಎಂದು ತಿಳಿದುಬಂದಿದ್ದು, ಇದು ಕಾರ್ಮಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

Corona positive for two workers at Vasavadatta factory
ವಾಸವದತ್ತಾ ಕಾರ್ಖಾನೆಯ ಇಬ್ಬರಿಗೆ ಕೊರೊನಾ..ಸೋಂಕು ದೃಢಪಟ್ಟಿದ್ದರೂ ಕೆಲಸಕ್ಕೆ ಬಂದ ಕಾರ್ಮಿಕ
author img

By

Published : Jul 9, 2020, 8:19 PM IST

ಸೇಡಂ (ಕಲಬುರಗಿ): ನಗರದ ವಾಸವದತ್ತಾ ಸಿಮೆಂಟ್ ಕಾರ್ಖಾನೆಯ ಇಬ್ಬರು ಗುತ್ತಿಗೆ ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಕಾರ್ಖಾನೆಯ ಕಾರ್ಮಿಕ ವಲಯದಲ್ಲಿ ಆತಂಕ ಹೆಚ್ಚಿಸಿದೆ.

ಇಂಜೇಪಲ್ಲಿ ಮತ್ತು ಮಾಧವಾರ ಗ್ರಾಮದ ಇಬ್ಬರು ಗುತ್ತಿಗೆ ಕಾರ್ಮಿಕರಲ್ಲಿ ಕೊರೊನಾ ದೃಢಪಟ್ಟ ಹಿನ್ನೆಲೆ, ಸೋಂಕಿತರ ಕಲಬುರಗಿ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಕೊರೊನಾ ದೃಢಪಟ್ಟರೂ ಸಹ ಓರ್ವ ಕಾರ್ಮಿಕ ಗುರುವಾರ ಬೆಳಗ್ಗೆ ಕೆಲಸಕ್ಕೆ ಹಾಜರಾಗಿದ್ದ ಎಂದು ತಿಳಿದುಬಂದಿದ್ದು, ನಂತರ ಆತನನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದು ಕಾರ್ಮಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.