ETV Bharat / state

ಕಲಬುರಗಿಯಲ್ಲಿ ಕೊರೊನಾಗೆ 4 ಬಲಿ... 208 ಮಂದಿ ಗುಣಮುಖ

author img

By

Published : Aug 9, 2020, 9:42 PM IST

ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಕೊರೊನಾಗೆ ಬಲಿಯಾಗಿದ್ದು, ಸೋಂಕಿನಿಂದ 208 ಜನರು ಗುಣಮುಖರಾಗಿದ್ದಾರೆ.

Corona positive for 194 people in Kalaburagi district
ಕಲಬುರಗಿಯಲ್ಲಿ ಕೊರೊನಾಗೆ 4 ಬಲಿ...208 ಮಂದಿ ಗುಣಮುಖ

ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ನಾಲ್ವರು ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 140ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಐಎಲ್​ಐ ಹಿನ್ನೆಲೆಯಿಂದ ಕಲಬುರಗಿಯ ಜೆ.ಆರ್.ನಗರದ 45 ವರ್ಷದ ಮಹಿಳೆ ಹಾಗೂ ತೀವ್ರ ಉಸಿರಾಟ ತೊಂದರೆ ಜೊತೆಗೆ ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ 65 ವರ್ಷದ ವೃದ್ಧ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆ ಜೊತೆಗೆ ಮಧುಮೇಹ‌ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲ್ಲಹಂಗರಗಾ ಗ್ರಾಮದ 64 ವರ್ಷದ ವೃದ್ಧ ಆ.​ 2 ರಂದು ಆಸ್ಪತ್ರೆಗೆ ದಾಖಲಾಗಿ, ಅಂದೇ ನಿಧನ ಹೊಂದಿದ್ದಾರೆ. ಇನ್ನು, ತೀವ್ರ ಉಸಿರಾಟ ತೊಂದರೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಸಮತಾ ಕಾಲೋನಿಯ 60 ವರ್ಷದ ವೃದ್ಧೆ ಆ. 5ರಂದು ಆಸ್ಪತ್ರೆಗೆ ದಾಖಲಾಗಿ, ಆ.7 ರಂದು ನಿಧನ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಂದು 194 ಜನರಲ್ಲಿ ಕೊರೊನಾ ಸೋಂಕು ಧೃಡಪಟ್ಟಿದ್ದು, ಸೋಂಕಿತರ ಸಂಖ್ಯೆ 7,341ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿನಿಂದ 208 ಜನ ಗುಣಮುಖರಾಗಿದ್ದು, ಈವರೆಗೆ ಸೋಂಕಿನಿಂದ ಒಟ್ಟು 4,729 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,472 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.