ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದ ಸುಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ.
ಕೊರೊನಾ ಆತಂಕ ಹೆಚ್ಚುತಿರುವ ಹಿನ್ನೆಲೆ ದೇಶವೇ ಲಾಕ್ ಡೌನ್ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಹಿನ್ನೆಲೆ ಜಿಲ್ಲೆಯ ಬಹುತೇಕ ಧಾರ್ಮಿಕ ಸ್ಥಳಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಕೊರೊನಾದಿಂದ ಕಲಬುರಗಿಯಲ್ಲೆ ಮೊದಲು ಸಾವು ಸಂಭವಿಸಿ ಕಾರಣ ಜಿಲ್ಲೆಯಲ್ಲಿ ಕಟ್ಟೆಚರ ವಹಿಸಲಾಗಿದೆ.
ಉಗ್ರ ಸ್ವರೂಪಿ ಎಂದೆನಿಸಿಕೊಂಡ ವೀರಭದ್ರೇಶ್ವರ ದೇವಸ್ಥಾನದ ಹಿಂದೆಂದೂ ಪ್ರವಾಹ, ನೆರೆಹಾವಳಿ, ಭೂಕಂಪನ ಹೀಗೆ ವಿವಿಧ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸಿದ್ದಾಗಲೂ ವೀರಭದ್ರನ ದೇವಸ್ಥಾನ ಬಾಗಿಲು ಎಂದು ಮುಚ್ಚಿರಲ್ಲಿಲ್ಲ. ಇದೀಗ ಕೊರೊನಾ ಎಂಬ ಮಹಾಮಾರಿ ಇಂದ ಬಾಗಿಲಿಗೆ ಬೀಗ ಹಾಕುವ ಪರಿಸ್ಥಿತಿ ಬಂದೊದಗಿದ್ದು ಭಕ್ತರನ್ನು ಆತಂಕಕ್ಕೆ ದೂಡಿದೆ.
ಅಮವಾಸ್ಯೆ, ಹಬ್ಬ ಹರಿದಿನ ಸೇರಿದಂತೆ ಪ್ರತಿನಿತ್ಯ ದೇವಸ್ಥಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಿಕ್ಕಿರಿದು ಜನ ಸೇರುತ್ತಿದ್ದರು. ರಾಜ್ಯ ಮಾತ್ರವಲ್ಲದೆ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ಹಲವೆಡೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಆದ್ರೆ ಕೊರೊನಾ ಭೀತಿ ಹಿನ್ನೆಲೆ ಇದೆ ಮೊದಲು ಭಾರಿಗೆ ಚಿತ್ತಾಪುರ ತಹಶೀಲ್ದಾರ ಆದೇಶದಂತೆ ಮಂಗಳವಾರ ಬೆಳಗ್ಗೆಯೇ ದೇವರ ಗರ್ಭ ಗುಡಿಗೆ ಬೀಗ ಹಾಕಲಾಗಿದೆ. ಸರಕಾರದ ಮುಂದಿನ ಆದೇಶದ ವರೆಗೂ ಭಕ್ತರಾರಿಗೂ ದೇವಸ್ಥಾನ ಪ್ರವೇಶ ಇರುವುದಿಲ್ಲ. ಅರ್ಚಕರು ಮಾತ್ರ ಎಂದಿನಂತೆ ದೇವರಿಗೆ ಪೂಜೆ ಸಲ್ಲಿಸುವರು. ಭಕ್ತರು ಸಹಕರಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.