ETV Bharat / state

ನಳಿನ್‌ ಕುಮಾರ್‌ ಕಟೀಲ್‌ ಭೇಟಿ ಮಾಡಿದ ನಾಯಕರಲ್ಲಿ ಕೊರೊನಾ ಆತಂಕ - bjp leaders facing corona problem

ಈಚೆಗೆ ಕಲಬುರಗಿ ಪ್ರವಾಸ ಮುಗಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಜಿಲ್ಲೆಯ ಬಿಜೆಪಿ ನಾಯಕರಿಗೆ ಆತಂಕ ಶುರುವಾಗಿದೆ.

Corona anxiety for BJP leaders in kalburgi
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್​ರನ್ನು ಸ್ವಾಗತಿಸಿದ ಸಚಿವರು
author img

By

Published : Aug 30, 2020, 9:04 PM IST

ಕಲಬುರಗಿ: ಕಳೆದ ಆಗಸ್ಟ್ 26 ಮತ್ತು 27ರಂದು ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಸೇರಿದಂತೆ ನಾಲ್ಕು ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದ ಕಟೀಲ್, ವಿವಿಧ ಸಭೆ, ಸಮಾರಂಭಗಳಲ್ಲಿ ಕೂಡ ಭಾಗಿಯಾಗಿದ್ದರು.

Corona anxiety for BJP leaders in kalburgi
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್​ ಅವರರನ್ನು ಸ್ವಾಗತಿಸಿದ ಸಚಿವ ಪ್ರಭು ಚವ್ಹಾಣ್

ಕಟೀಲ್ ಅವರು ಕಲಬುರಗಿಗೆ ಆಗಮಿಸಿದ ವೇಳೆ ಸಚಿವ ಪ್ರಭು ಚವ್ಹಾಣ್, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಅವರನ್ನು ಅದ್ಧೂರಿಯಾಗಿ ಸನ್ಮಾನಿಸಿ, ಸ್ವಾಗತಿಸಿದ್ದರು. ಅಲ್ಲದೆ, ಕಲ್ಯಾಣ ಕರ್ನಾಟಕ ಪ್ರವಾಸದಲ್ಲಿಯೂ ಅವರೊಟ್ಟಿಗೆ ಭಾಗವಹಿಸಿದ್ದರು.

ಕೊರೊನಾ ಪಾಸಿಟಿವ್​ ಇರುವುದನ್ನು ಸ್ವತಃ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡುವ ಮೂಲಕ ಇಂದು ಖಚಿತಪಡಿಸಿದ್ದಾರೆ. ಇದರಿಂದಾಗಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಕೊರೊನಾ ಭೀತಿ ಆವರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.