ಕಲಬುರಗಿ: ನಿಷೇಧಾಜ್ಞೆ ನಡುವೆಯೂ ಮನೆಯಿಂದ ಜನ ಹೊರ ಬರುತ್ತಿರುವ ಹಿನ್ನೆಲೆ ಮೈಕ್ ಮೂಲಕ ಅನೌನ್ಸ್ ಮಾಡಿ ಗುಂಪು ಗುಂಪಾಗಿ ನಿಂತ ಜನರನ್ನು ಪೊಲೀಸರು ಚದುರಿಸುತ್ತಿದ್ದಾರೆ.
ಜಿಲ್ಲೆಯಾದ್ಯಂತ 144 ನಿಷೇಧಾಜ್ಞೆ ಜಾರಿಗೆ ತಂದು ಲಾಕ್‌ಡೌನ್ ಮಾಡಿದರೂ ಬೆಳಗ್ಗೆಯಿಂದ ಜನರು ಮನೆಯಿಂದ ಹೊರಗೆ ಓಡಾಡುವ ದೃಶ್ಯ ಕಂಡು ಬರುತ್ತಿದೆ. ಈ ಹಿನ್ನೆಲೆ ಕಲಬುರಗಿ ನಗರದೆಲ್ಲೆಡೆ ಪೊಲೀಸರು ಮೈಕ್ ಮೂಲಕ ಅನೌನ್ಸ್ ಮಾಡಿ ಮನೆಯಿಂದ ಯಾರೂ ಹೊರಗೆ ಬಾರದೆ ಕೊರೊನಾ ತಡೆಗಟ್ಟಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಗುಂಪು ಗುಂಪಾಗಿ ಸೇರದಂತೆ ಎಚ್ಚರಿಕೆ ನೀಡಿದ ಪೊಲೀಸರು, ಅನಗತ್ಯವಾಗಿ ರಸ್ತೆ ಬದಿಯಲ್ಲಿ ನಿಂತವರನ್ನು ಮನೆಗೆ ಕಳುಹಿಸಿದರು. ಅಲ್ಲದೇ ಹಣ್ಣು, ತರಕಾರಿ, ಮೆಡಿಕಲ್ ಶಾಪ್ಗಳನ್ನು ಹೊರತುಪಡಿಸಿ ಇತರೆ ಅಂಗಡಿಗಳನ್ನು ಬಂದ್ ಮಾಡಿಸಿದರು.