ETV Bharat / state

ಕಲಬುರಗಿ: ಹೆದ್ದಾರಿ ಮೇಲೆ ಕಾನ್ಸಟೇಬಲ್ ಮೃತದೇಹ ಪತ್ತೆ - ಸೋಮವಾರ ಬೆಳಗಿನ ಜಾವ ಪ್ರಕರಣ ಬೆಳಕಿಗೆ ಬಂದಿದೆ

ವಾಡಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಪೊಲೀಸ್ ಪೇದೆಯೊಬ್ಬರ ಮೃತದೇಹ ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

constable-body-was-found-on-the-highway-in-kalaburagi
ಕಲಬುರಗಿ: ಹೆದ್ದಾರಿ ಮೇಲೆ ಕಾನ್ಸಟೇಬಲ್ ಮೃತದೇಹ ಪತ್ತೆ
author img

By

Published : Mar 20, 2023, 11:00 PM IST

ಕಲಬುರಗಿ: ವಾಡಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಪೊಲೀಸ್ ಪೇದೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲೂಕು ತೆಗ್ಗಳ್ಳಿ ಗ್ರಾಮದವರಾದ, ಸದ್ಯ ವಾಡಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರಿಯಪ್ಪ (37) ಮೃತ ಕಾನ್ಸಟೇಬಲ್ ಎಂದು ಗುರುತಿಸಲಾಗಿದೆ. ಭಾನುವಾರ ತಡರಾತ್ರಿ ಘಟನೆ ನಡೆದಿದ್ದು, ಸೋಮವಾರ ಬೆಳಗಿನ ಜಾವ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಕರಿಯಪ್ಪ ಬಳಸಿದ ಬೈಕ್ ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.‌

ಮೃತ ಕರಿಯಪ್ಪ ಭಾನುವಾರ ವಾಡಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ನಾಲವಾರ ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಕರ್ತವ್ಯ ಮುಗಿಸಿ ವಾಡಿ ಪಟ್ಟಣದ ಪೊಲೀಸ್ ಕ್ವಾಟರ್ಸ್ ನಲ್ಲಿರುವ ಮನೆಗೆ ವಾಪಸ್ ಆಗಿದ್ದರು. ಆದರೆ ಮನೆವರೆಗೆ ಅಪರಿಚಿತ ಕಾರಿನಲ್ಲಿ ಡ್ರಾಪ್ ಪಡೆದಿದ್ದರು ಎಂದು ತಿಳಿದುಬಂದಿದೆ. ಹೀಗೆ ಬಂದವರು ರಾತ್ರಿ ಊಟ‌ ಮುಗಿಸಿ ಮಲಗಿದ್ದರು. ತಡರಾತ್ರಿ ಮತ್ತೆ ಬೈಕ್ ತೆಗೆದುಕೊಂಡು ನಾಲವಾರ ಚೆಕ್ ಪೋಸ್ಟ್ ಕಡೆಗೆ ಹೋಗಿದ್ದರು ಎನ್ನಲಾಗುತ್ತಿದೆ.

ಸ್ಥಳಕ್ಕೆ ಎಸ್ಪಿ ಇಶಾ‌ ಪಂತ್, ಡಿವೈಎಸ್ಪಿ‌ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯ ನಂತರವೇ ಕಾನ್ಸಟೇಬಲ್ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

ಇದನ್ನೂ ಓದಿ:ಅಕ್ರಮ ಸಂಬಂಧ ಮುಚ್ಚಿಡಲು ಬಾಲಕಿ ಹತ್ಯೆ: ಮೂವರು ಆರೋಪಿಗಳ ಬಂಧನ

ತುಂಡಾಗಿ ಬಿದ್ದಿದ್ದ ವಿದ್ಯುತ್‌ ಸರ್ವಿಸ್ ವೈರ್‌‌ ತಗುಲಿ ಸಾವಿಗೀಡಾಗಿದ್ದ ತಾಯಿ, ಇಬ್ಬರು ಮಕ್ಕಳು: ತುಂಡಾಗಿ ಬಿದ್ದಿದ್ದ ಸರ್ವಿಸ್ ವೈರ್ ತಗುಲಿ ತಾಯಿ ಮತ್ತು ಇಬ್ಬರು ಮಕ್ಕಳು ದುರ್ಮರಣ ಹೊಂದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಧನಗರದಲ್ಲಿ ಶನಿವಾರ ನಡೆದಿತ್ತು. ಮೃತರನ್ನು ತಾಯಿ ಶರಣಮ್ಮ(45), ಮಕ್ಕಳಾದ ಮುಖೇಶ್ (22) ಮತ್ತು ಸುರೇಶ್​​ (20) ಎಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಆಲಿಕಲ್ಲು ಸಮೇತ ಮಳೆ ಸುರಿದಿತ್ತು. ಶನಿವಾರ ತಡರಾತ್ರಿ 12 ಗಂಟೆ ಸುಮಾರಿಗೆ ಚಿಂಚೋಳಿಯಲ್ಲಿ ಗುಡುಗು ಮಳೆ ಅಗಿತ್ತು. ಮನೆ ಸಮೀಪ ತಂದಿಟ್ಟಿದ್ದ ತೊಗರಿ ಹೊಟ್ಟು ನೆನೆಯುತ್ತದೆ ಎಂದು ಅದನ್ನು ಮುಚ್ಚಲು ಶರಣಮ್ಮ ಹೊರ ಹೋಗಿದ್ದರು. ಮಕ್ಕಳಾದ ಮುಖೇಶ್, ಸುರೇಶ ತಾಯಿಯನ್ನು ಹಿಂಬಾಲಿಸಿ ಹೋಗಿದ್ದು ಮೂವರಿಗೂ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದರು.

ಇದನ್ನೂ ಓದಿ:ಹಳೆ ವೈಷಮ್ಯ: ಕಾರು ನಿಲ್ಲಿಸುವ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಮಡದಿ ಮಕ್ಕಳನ್ನು ಅಂಬಣ್ಣಾ ಹುಡುಕಿಕೊಂಡು ಹೋಗಿದ್ದು, ಇವರಿಗೂ ವಿದ್ಯುತ್ ಶಾಕ್ ತಗುಲಿತ್ತು. ಆದರೆ ಅಂಬಣ್ಣಾ ಅಪಾಯದಿಂದ ಪಾರಾಗಿದ್ದರು. ಜೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಸೂಕ್ತ ಪರಿಹಾರಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದರು. ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ:ಇತ್ತೀಚೆಗಷ್ಟೇ ಮದುವೆಯಾಗಿದ್ದ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.