ETV Bharat / state

ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಆರೋಪ: ಬಿಜೆಪಿ ಮುಖಂಡನ ಬಂಧಿಸುವಂತೆ ಕೈ ಕಾರ್ಯಕರ್ತರಿಂದ ಎಸ್ಪಿ ಕಚೇರಿ ಮುತ್ತಿಗೆ - ಬಿಜೆಪಿ ಮುಖಂಡ ಮಣಿಕಂಠ ರಾಠೋಡ್

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರು ಶಾಸಕ ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೈ ಕಾರ್ಯಕರ್ತರಿಂದ ಎಸ್ಪಿ ಕಚೇರಿ ಮುತ್ತಿಗೆ
ಕೈ ಕಾರ್ಯಕರ್ತರಿಂದ ಎಸ್ಪಿ ಕಚೇರಿ ಮುತ್ತಿಗೆ
author img

By

Published : Nov 12, 2022, 5:22 PM IST

ಕಲಬುರಗಿ: ಶಾಸಕ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡುವ ಭರಾಟೆಯಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಕಾರ್ಯಕರ್ತರು ಕೆರಳಿದ್ದಾರೆ.‌ ಕಲಬುರಗಿ ನಗರದ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ, ಮಣಿಕಂಠ ರಾಠೋಡ್​​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಲಿ‌ ಶಾಸಕರಿಗೆ ಬಹಿರಂಗವಾಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಮಣಿಕಂಠ ರಾಠೋಡ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೈ ಕಾರ್ಯಕರ್ತರು ಆಗ್ರಹಿಸಿದರು. ರಾಜ್ಯ ಸರ್ಕಾರದ ಹಗರಣಗಳನ್ನು ಬಯಲಿಗೆಳೆದು ವಿಧಾನಸೌಧದ ಒಳಗೆ ಹೊರಗೆ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಳ್ಳುತ್ತಿರುವ ಪ್ರಿಯಾಂಕ್ ಖರ್ಗೆ ಅವರನ್ನ ಮುಗಿಸಲು ಬಿಜೆಪಿ ನಾಯಕರು ತಮ್ಮ ಸ್ಥಳೀಯ ಮುಖಂಡರನ್ನ ಮುಂದೆ ಬಿಟ್ಟು ಪ್ರಯತ್ನ ಮಾಡ್ತಿದ್ದಾರೆ ಎಂದು ದೂರಿದರು.

ಕೈ ಕಾರ್ಯಕರ್ತರಿಂದ ಎಸ್ಪಿ ಕಚೇರಿ ಮುತ್ತಿಗೆ
ಕೈ ಕಾರ್ಯಕರ್ತರಿಂದ ಎಸ್ಪಿ ಕಚೇರಿ ಮುತ್ತಿಗೆ

ಹಾಲಿ ಶಾಸಕರಿಗೆ ಬಹಿರಂಗವಾಗಿ ಕೊಲೆ ಮಾಡುವುದಾಗಿ ಹೇಳಿಕೆ ನೀಡಿದ ಮಣಿಕಂಠ ರಾಠೋಡ್ ಅವರನ್ನು ಬಂಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು. ಭಾಷಣದ ವೇಳೆ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಎಕೆ 47 ನಿಂದ ಸಾಯಿಸ್ತಿರಾ ತೋಪು ತಂದು ಸಾಯಿಸ್ತಿರಾ ಸಾಯಿಸಿ, ನಾವು ನಿಮ್ಮನ್ನ ಸಾಯಿಸ್ತೀವಿ ಎಂದು ಹೇಳಿಕೆ ಕೊಟ್ಟಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು.

(ಓದಿ: ಬಿಜೆಪಿ ಸರ್ಕಾರದಿಂದ ಪ್ರಿಯಾಂಕ್ ಖರ್ಗೆ ಕೊಲೆಗೆ ಸಂಚು: ಕಾಂಗ್ರೆಸ್​​​ ನಾಯಕ ಗಂಭೀರ ಆರೋಪ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.