ಸೇಡಂ(ಕಲಬುರಗಿ): ಪುರಸಭೆಯ ಉಪ ಚುನಾವಣೆಯ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಿದೆ. ಇದು ಎರಡು ಪಕ್ಷಗಳ ಮಧ್ಯದ ಚುನಾವಣೆಯಾಗಿತ್ತು. ಬಿಜೆಪಿ ಭ್ರಷ್ಟ ಆಡಳಿತದಿಂದ ಬೇಸತ್ತ ಮತದಾರ ತೀರ್ಪು ನೀಡಿದ್ದಾನೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಭದ್ರಕೋಟೆ ಎಂದೆನಿಸಿಕೊಂಡಿದ್ದ ವಾರ್ಡ್ ನಂ. 13 ಕಾಂಗ್ರೆಸ್ ಪಾಲಾಗಿದೆ. ಡಿಸೆಂಬರ್ 27 ರಂದು ನಡೆದ ಪುರಸಭೆಯ ವಾರ್ಡ್ ನಂ. 13 ವೆಂಕಟೇಶ್ವರ ನಗರ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಭಾರಿ ಮುಖಭಂಗ ಅನುಭವಿಸಿದೆ.
ನಿರಂತರ ಮೂರು ಬಾರಿ ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸಿದ್ದ ವೆಂಕಟೇಶ್ವರ ನಗರ ಬಡಾವಣೆಯ ಜನ ಈ ಬಾರಿ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್ಗೆ ಮತ ನೀಡಿದ್ದಾರೆ. ಇದು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎನ್ನಲಾಗುತ್ತಿದ್ದು, ಒಟ್ಟು 778 ಮತಗಳು ಪಡೆಯುವ ಮೂಲಕ ಆಡಳಿತಾರೂಢ ಬಿಜೆಪಿ ಎದುರು 425 ಮತಗಳ ಭಾರಿ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ದೇವು ತಿಪ್ಪಣ್ಣ ದೊರೆ ಅಭೂತಪೂರ್ವ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ಪ್ರತಿಸ್ಪರ್ಧಿ ಬಿಜೆಪಿಯ ಸಂದೀಪ್ ಕುಮಾರ್, ಬಸವರಾಜ ಪ್ಯಾಟಿ ಕೇವಲ 353 ಮತ ಪಡೆದು ಸೋಲುಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ದಿನೇಶ ನಾಯಕೋಡಿ 152 ಮತ ಪಡೆದಿದ್ದಾರೆ. ಚುನಾವಣೆಯಲ್ಲಿ 1663 ಮತದಾರರ ಪೈಕಿ 1294 ಮತದಾನವಾಗಿತ್ತು. ಇದರಲ್ಲಿ 11 ನೋಟಾ ಚಲಾವಣೆಯಾಗಿದ್ದವು.
ಓದಿ: BIG BREAKING... ನಾಳೆ ಕರ್ನಾಟಕ ಬಂದ್ ಇಲ್ಲ: ಸಿಎಂ ಸಂಧಾನ ಸಭೆ ಸಕ್ಸಸ್