ETV Bharat / state

ದೇವೇಗೌಡ, ಸಿದ್ದರಾಮಯ್ಯ ಇಬ್ಬರನ್ನೂ ಕಾರ್ಯಕ್ರಮಕ್ಕೆ ಕರೆಯಬೇಕಿತ್ತು: ಸಿಎಂ ಇಬ್ರಾಹಿಂ - ರ್ಮಲಾನಂದ ಸ್ವಾಮೀಜಿಗೆ ಅಪಮಾನ ವಿಚಾರ

ಸಿಎಂ ಬೊಮ್ಮಾಯಿ ಬಸವಕೃಪಾ ಮರೆತು, ಕೇಶವ ಕೃಪಾಕ್ಕೆ ಶರಣಾಗಿದಾರೆ. ಅವರು 40 ಪರ್ಸೆಂಟ್​​, ಇವರು 20 ಪರ್ಸೆಂಟ್. ಕಾಂಗ್ರೆಸ್ ಹಾಗೂ ಬಿಜೆಪಿ ಇಬ್ಬರೂ ಒಂದೇ ಬೀದಿಯಲ್ಲಿರುವ ಪತಿವ್ರತೆಯರು- ಸಿಎಂ ಇಬ್ರಾಹಿಂ

Cm Ibrahim
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ
author img

By

Published : Nov 13, 2022, 7:33 AM IST

ಕಲಬುರಗಿ: ಬಿಜೆಪಿಯವರಿಗೆ ಅಧಿಕಾರದ ಮದ ನೆತ್ತಿಗೇರಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು. ಅಲ್ಲದೇ, ಕೆಂಪೇಗೌಡರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ದೇವೇಗೌಡರು ಮತ್ತು ಸಿದ್ದರಾಮಯ್ಯ ಇಬ್ಬರನ್ನೂ ಕರೆಯಬೇಕಿತ್ತು ಎಂದರು.

ನಿರ್ಮಲಾನಂದ ಸ್ವಾಮೀಜಿಗೆ ಅಪಮಾನ ವಿಚಾರ: ಸಿಎಂ ಇಬ್ರಾಹಿಂ ಪ್ರತಿಕ್ರಿಯೆ

ಈ ಹಿಂದೆ ಅಮಿತ್ ಶಾ ಅವರು ಸ್ವಾಮೀಜಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತಿದ್ದರು. ಈಗ ನಿರ್ಮಲಾನಂದ ಸ್ವಾಮೀಜಿ ಅವರ ಹೆಗಲ ಮೇಲೆ ಕೈ ಹಾಕಿ ಸಚಿವ ಅಶೋಕ್ ಘೋರ ಅಪಮಾನ ಮಾಡಿದ್ದಾರೆ. ಯಾರಿಗೆ ಯಾವ ರೀತಿ ಗೌರವ ಕೊಡಬೇಕು ಅನ್ನೋದನ್ನು ಬಿಜೆಪಿಯವರು ಮರೆತಿದ್ದಾರೆ. ಬಿಜೆಪಿಯಲ್ಲಿ ಬುದ್ದಿವಾದ ಹೇಳುವ ಹಿರಿಯರು ಯಾರೂ ಇಲ್ಲ ಎಂದು ಟೀಕಿಸಿದರು.

ಸಿಎಂ ಬೊಮ್ಮಾಯಿ ಬಸವಕೃಪಾ ಮರೆತು ಕೇಶವ ಕೃಪಾಕ್ಕೆ ಶರಣಾಗಿದಾರೆ. ಅವರು 40 ಪರ್ಸೆಂಟ್, ಇವರು 20 ಪರ್ಸೆಂಟ್. ಹಾಗಾಗಿ ಇಬ್ಬರು ಒಂದೇ ಬೀದಿಯಲ್ಲಿರೋ ಪತಿವ್ರತೆಯರು ಎಂದು ಇಬ್ರಾಹಿಂ ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದಿರೋದು ಜೆಡಿಎಸ್‌ಗೆ ಲಾಭವಾಗಿದೆ. ಇದೇ ರೀತಿ ಇನ್ನೂ ಎರಡು ಸಲ ರಾಜ್ಯಕ್ಕೆ ಬಂದು ಹೋದರೆ ಜೆಡಿಎಸ್‌ಗೆ ಮತ್ತಷ್ಟು ಒಳ್ಳೆಯದು. ಎರಡೂ ಪಕ್ಷಗಳು ಸಾಕಷ್ಟು ಭ್ರಷ್ಟಾಚಾರ ಮಾಡಿವೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರೋದು ಶತಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇವೇಗೌಡರು ಪ್ರಧಾನಿಯಾದ ಮೊದಲ ಕನ್ನಡಿಗ. ಅವರನ್ನು ಮೂರ್ತಿ ಅನಾವರಣ ಸಮಾರಂಭಕ್ಕೆ ಕರೆಯದೆ ಇರುವುದು ಕನ್ನಡಿಗರಿಗೆ ಮಾಡಿದ ಅವಮಾನ. ಅದರಂತೆ ಸಿದ್ದರಾಮಯ್ಯ ಅವರನ್ನೂ ಸಹ ಕಾರ್ಯಕ್ರಮಕ್ಕೆ ಕರೆಯಬೇಕಿತ್ತು. ಪ್ರಧಾನಿ ನಾಡು ಕಟ್ಟಲು ರಾಜ್ಯಕ್ಕೆ ಬಂದಿಲ್ಲ. ಬಿಜೆಪಿ ಕಟ್ಟಲು ಬಂದಿದ್ದಾರೆ ಎಂದು ಕುಟುಕಿದರು.

ಇದನ್ನೂ ಓದಿ: ಕಾಂಗ್ರೆಸ್​ಗೆ ವಿರೋಧ ಪಕ್ಷದಲ್ಲಿ ಕುಳಿತು ಅಭ್ಯಾಸ ಇಲ್ಲ, ಬಿಜೆಪಿಗೆ ಅಧಿಕಾರ ನಡೆಸಿ ರೂಢಿ ಇಲ್ಲ: ಸಿಎಂ ಇಬ್ರಾಹಿಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.