ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಕಿಂಗ್‌ಪಿನ್ ಆರ್. ಡಿ ಪಾಟೀಲ್ ಹಾಗೂ ಜ್ಞಾನಜ್ಯೋತಿ ಶಾಲೆ ಹೆಡ್‌ಮಾಸ್ಟರ್ ಕಾಶಿನಾಥ್ ಚಿಲ್ ನನ್ನು ಸಿಐಡಿ ಅಧಿಕಾರಿಗಳು ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ.
ನೋಬೆಲ್ ಶಾಲೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಜುಲೈ 16 ವರೆಗೆ ಸಿಐಡಿ ಕಸ್ಟಡಿಗೆ ನೀಡಿ ಕಲಬುರಗಿ ಮೂರನೇ ಜೆಎಮ್‌ಎಫ್‌ಸಿ ನ್ಯಾಯಾಲಯವು ಆದೇಶ ಹೊರಡಿಸಿದ್ದು, ಇಬ್ಬರು ಆರೋಪಿಗಳನ್ನ ಮೂರನೇ ಬಾರಿ ವಶಕ್ಕೆ ಪಡೆದು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ ಪೌಲ್ ಬಂಧನದ ನಂತರ ನೇಮಕಾತಿ ಪ್ರಕರಣಕ್ಕೆ ತೆರೆ ಬೀಳುತ್ತದೆ ಎಂದು ನಿಟ್ಟುಸಿರು ಬಿಟ್ಟಿದ್ದ ಆರೋಪಿಗಳಿಗೆ ಸಿಐಡಿ ಅಧಿಕಾರಿಗಳು ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ. ಇದೀಗ ನೊಬೆಲ್ ಶಾಲೆಯಲ್ಲಿ ನಡೆದ ಅಕ್ರಮ ಪ್ರಕರಣವನ್ನು ಕೈಗೆತ್ತಿಕೊಂಡ ಸಿಡಿಐ ತಂಡ ತನಿಖೆ ಚುರುಕುಗೊಳಿಸಿದ್ದು, ಆರೋಪಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಓದಿ: ಕಾವೇರಿ ಹೊರಹರಿವು ಹೆಚ್ಚಳ: ಭೋರ್ಗರೆಯುತ್ತಿದೆ ಭರಚುಕ್ಕಿ, ಹೊಗೆನಕಲ್ ಫಾಲ್ಸ್