ಕಲಬುರಗಿ: ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ಶಹಾಬಾದ ತಾಲೂಕಿನ ತೊನಸನಳ್ಳಿ ಗ್ರಾಮದಲ್ಲಿ ನಡೆದಿದೆ.
ನವೀನ್ (12) ಮೃತ ಬಾಲಕ. ತೊನಸನಳ್ಳಿ ಗ್ರಾಮದ ನಿವಾಸಿಯಾದ ನವೀನ್, ಕುರಿ ಮೇಯಿಸಲು ಹೋಗಿದ್ದಾಗ ಕೃಷಿ ಹೊಂಡದಲ್ಲಿ ಕುರಿ ಹೋಗಿತ್ತು, ಅದನ್ನು ರಕ್ಷಿಸಿಕೊಂಡು ಬರಲು ಹೋದಾಗ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಕೃಷಿ ಹೊಂಡ ತುಂಬಿ ಜಮೀನಲ್ಲಿ ನೀರು ನಿಂತಿದೆ. ಶಹಾಬಾದ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.