ಕಲಬುರಗಿ: ವಿದ್ಯುತ್ ತಂತಿ ತಗುಲಿ ಸಹೋದರರಿಬ್ಬರು ದುರ್ಮರಣಕ್ಕೀಡಾದ ಘಟನೆ ಯಡ್ರಾಮಿ ತಾಲೂಕಿನ ಕಣಮೇಶ್ವರ ಗ್ರಾಮದಲ್ಲಿ ನಡೆದಿದೆ. ಆಕಾಶ ಸುಂಬಡ (18), ಪ್ರಕಾಶ ಸುಂಬಡ (21) ಮೃತ ದುರ್ದೈವಿಗಳಾಗಿದ್ದಾರೆ. ಯಡ್ರಾಮಿ ತಾಲೂಕಿನ ಹರನಾಳ ಗ್ರಾಮದ ನಿವಾಸಿಗಳಾದ ಇವರು, ಜಮೀನೊಂದರಲ್ಲಿ ನಡೆಯುತ್ತಿದ್ದ ಚೆಕ್ ಡ್ಯಾಮ್ ಕಾಮಗಾರಿಗಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ದಾಟಿ ಹೋಗುವಾಗ ಅವಘಡ ಸಂಭವಿಸಿದೆ.
ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.